ಸುಳ್ಯ: ಪ್ರೇಯಸಿಯ ಜೊತೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಗಂಡ : ರಸ್ತೆಯಲ್ಲೇ ರಂಪಾಟ ಮಾಡಿದ ಪತ್ನಿ – Vishwanews24

Featured, ದಕ್ಷಿಣ ಕನ್ನಡ

ಸುಳ್ಯ: ಪ್ರೇಯಸಿಯ ಜೊತೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಗಂಡ : ರಸ್ತೆಯಲ್ಲೇ ರಂಪಾಟ ಮಾಡಿದ ಪತ್ನಿ

ಸುಳ್ಯ: ಮಂಗಳೂರು ಮೂಲದ ವಿವಾಹಿತ ಯುವಕನೋರ್ವ ಪ್ರೇಯಸಿಯೊಂದಿಗೆ ಸುಳ್ಯದ ಗಾಂಧಿನಗರದ ಲಾಡ್ಜ್ ಒಂದರಲ್ಲಿ ಬಂದು ತಂಗಿದ್ದಾರೆಂದು ತಿಳಿದ ಯುವಕನ ಪತ್ನಿ ಡಿ.೧೧ರಂದು ಸಂಜೆ ಸುಳ್ಯಕ್ಕೆ ಬಂದು ಅವರು ತಂಗಿದ್ದ ಲಾಡ್ಜ್ ಬಳಿ ಬಂದು ಬೀದಿರಂಪ ಮಾಡಿದ ಘಟನೆ ವರದಿಯಾಗಿದೆ.

ಲಾಡ್ಜ್ ನಲ್ಲಿದ್ದ ಯುವತಿಯ ಜತೆಗಿದ್ದ ವಿವಾಹಿತ ಯುವಕ ತನ್ನ ಪತ್ನಿ ಲಾಡ್ಜ್‌ನ ರಿಸೆಪ್ಶನ್ ಬಳಿಗೆ ಬಂದು ನಿಂತಿರುವ ವಿಷಯ ತಿಳಿದು ಪ್ರೇಯಸಿಯೊಂದಿಗೆ ಲಾಡ್ಜ್ ನಿಂದ ಹೊರಗೆ ಬಂದಿದ್ದಾರೆ.

ಸ್ಯಾಂಡಲ್ ವುಡ್ ಖ್ಯಾತ ಹಾಸ್ಯ ನಟ ಗಂಡಸಿ ನಾಗರಾಜ್ ಇನ್ನಿಲ್ಲ – Vishwanews24

ಈ ಜೋಡಿಯನ್ನು ನೋಡಿದ ಆತನ ಹೆಂಡತಿ ರಸ್ತೆಯಲ್ಲಿ ಗಂಡನನ್ನು ಮತ್ತು ಆ ಯುವತಿಯನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದು, ಗಲಾಟೆ ಉಂಟಾಗಿದೆ. ಈ ವೇಳೆ ನೂರಾರು ಜನ ಜಮಾಯಿಸಿದ್ದು, ಕೋಪಗೊಂಡಿದ್ದ ಪತ್ನಿಯನ್ನು ಸಮಾಧಾನಪಡಿಸಲು ಯುವಕ ಎಷ್ಟೇ ಪ್ರಯತ್ನ ಪಟ್ಟರೂ ಆತನಿಗೆ ಸಾಧ್ಯವಾಗಲಿಲ್ಲ.

ಕೊನೆಗೆ ಪತಿ ಹಾಗೂ ಮತ್ತವನ ಪ್ರೇಯಸಿಯನ್ನು ರಸ್ತೆಯಲ್ಲಿ ಎಳೆದಾಡಿ, ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾಳೆ‌. ಪೊಲೀಸರಿಗೆ ವಿಷಯ ತಿಳಿದು ಅವರು ಬಂದು ಮೂವರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾಂತಾರ ಕ್ಲೈಮ್ಯಾಕ್ಸ್​ನಲ್ಲಿ ಕಂಡ ಬದಲಾವಣೆಯಿಂದ ನನಗೆ ರೋಮಾಂಚನ ಆಯಿತು. : ರಿಷಬ್​ ಶೆಟ್ಟಿ ಚಿತ್ರಕ್ಕೆ ಹೃತಿಕ್​ ರೋಷನ್​ ಮೆಚ್ಚುಗೆ – VIshwanews24

Leave a Reply