ಸೆ.19 ರಂದು ಫ್ರಾನ್ಸ್ ನ ರಫೇಲ್ ಸಮರ ವಿಮಾನ ಭಾರತೀಯ ವಾಯುಪಡೆಗೆ ಸೇರ್ಪಡೆ -Vishwanews24
ನವದೆಹಲಿ: ಫ್ರಾನ್ಸ್ ನ ರಫೇಲ್ ಸಮರ ವಿಮಾನ ಭಾರತೀಯ ವಾಯುಪಡೆಗೆ ಇದೇ 9 ರಂದು ಔಪಚಾರಿಕವಾಗಿ ಸೇರ್ಪಡೆಯಾಗಲಿದೆ.
ಇದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಮುಖ್ಯ ವಾಯುಪಡೆಯ ಮುಖ್ಯಸ್ಥ ಬಿಎಸ್ ಧನೋವಾ ಫ್ರಾನ್ಸ್ ಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. 9 ರಂದು ಫ್ರಾನ್ಸ್ ತನ್ನ ಮೊದಲ ರಫೇಲ್ ಫೈಟರ್ ವಿಮಾನವನ್ನು ಔಪಚಾರಿಕವಾಗಿ ಹಸ್ತಾಂತರಿಸಲಿದೆ ಎಂದು ಫ್ರಾನ್ಸ್ಅಧಿಕಾರಿಗಳು ಹೇಳಿದ್ದಾರೆ ಎಂದೂ ವರದಿ ಯಾಗಿದೆ .
ಔಪಚಾರಿಕ ಸೇರ್ಪಡೆ ಸಮಾರಂಭವು ಫ್ರಾನ್ಸ್ನ ಮೆರಿಗ್ನಾಕ್ನಲ್ಲಿ ನಡೆಯಲಿದೆ. ಇದಕ್ಕಾಗಿ ಸಚಿವ ರಾಜನಾಥ್ ಸಿಂಗ್ ಕೂಡ ಫ್ರಾನ್ಸ್ಗೆ ತೆರಳುವುದು ಬಹತೇಕ ನಿಚ್ಚಳ ಎನ್ನಲಾಗಿದೆ. ಭಾರತ- ಫ್ರಾನ್ಸ್ ಒಪ್ಪಂದಕ್ಕೆ ಸಹಿ ಹಾಕಿದ ಮೂರು ವರ್ಷಗಳಲ್ಲಿ ಮೊದಲನೆಯ ಸಮರ ವಿಮಾನ ಸೇರ್ಪಡೆ ಸಮಾರಂಭ ಸೆಪ್ಟೆಂಬರ್ ಮೂರನೇ ವಾರದಲ್ಲಿ ನಡೆಸಬೇಕು ಎಂದು ಭಾರತ ಫ್ರೆಂಚ್ ಸರ್ಕಾರಕ್ಕೆ ಸಷ್ಟಪಡಿಸಿತ್ತು .
ನಾಲ್ಕು ರಫೇಲ್ ಜೆಟ್ ವಿಮಾನಗಳು ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ಭಾರತಕ್ಕೆ ಬರಲಿವೆ ಒಪ್ಪಂದದ ಪ್ರಕಾರ ಎಲ್ಲಾ 36 ವಿಮಾನಗಳು 2022 ರ ವೇಳೆಗೆ ವಾಯುಪಡೆಯ ವಶಕ್ಕೆ ಬರಲಿವೆ ಎಂದೂ ಹೇಳಲಾಗಿದೆ. 2016 ರಲ್ಲಿ ಭಾರತವು ಫ್ರಾನ್ಸ್ನಿಂದ 36 ರಫೇಲ್ ಸಮರ ವಿಮಾನ ಖರೀದಿಗಾಗಿ 59,ಸಾವಿರ ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿತ್ತು.
