ಸೈನಿಕರಿಗೆ ನೀಡುವ ಪ್ರಶಸ್ತಿ ಮೊತ್ತ ಐದು ಪಟ್ಟು ಹೆಚ್ಚಳ : ಸಿಎಂ ಬೊಮ್ಮಾಯಿ ಘೋಷಣೆ – Vishwanews24
ಸೈನಿಕರಿಗೆ ನೀಡುವ ಪ್ರಶಸ್ತಿ ಮೊತ್ತ ಐದು ಪಟ್ಟು ಹೆಚ್ಚಳ : ಸಿಎಂ ಬೊಮ್ಮಾಯಿ ಘೋಷಣೆ – Vishwanews24
ಬೆಳಗಾವಿ: ಸೈನಿಕರಿಗೆ ನೀಡುವ ಪ್ರಶಸ್ತಿ ಮೊತ್ತವನ್ನು ಐದು ಪಟ್ಟು ಹೆಚ್ಚಳ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ಧಾರೆ.
ಬೆಳಗಾವಿಯಲ್ಲಿ ನಡೆದ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಸೈನಿಕರಿಗೆ ನೀಡುವ ಪ್ರಶಸ್ತಿ ಮೊತ್ತವನ್ನು 5 ಪಟ್ಟು ಹೆಚ್ಚಿಸಿ ಘೋಷಿಸಿದ್ದು, ರಾಜ್ಯ ಸರ್ಕಾರ ಶೌರ್ಯ ಪ್ರಶಸ್ತಿ ವಿಜೇತರಿಗೆ ನೀಡುವ ನಗದು ಅನುದಾನವನ್ನು ಇದೀಗ ಐದು ಪಟ್ಟು ಹೆಚ್ಚಿಸಿದೆ.
ಪರಮವೀರ ಚಕ್ರ 25 ಲಕ್ಷದಿಂದ 1.5 ಕೋಟಿ ರೂ. ಗೆ ಹೆಚ್ಚಳ ಮಾಡಲಾಗಿದೆ. ಮಹಾವೀರ ಚಕ್ರ 12 ಲಕ್ಷದಿಂದ 1 ಕೋಟಿ ರೂ.ಗೆ ಏರಿಕೆ, ಅಶೋಕ ಚಕ್ರ ಪ್ರಶಸ್ತಿ ನಗದು ಬಹುಮಾನವನ್ನು 25 ಲಕ್ಷದಿಂದ 1.5 ಕೋಟಿ ರೂ., ಕೀರ್ತಿ ಚಕ್ರ ಪ್ರಶಸ್ತಿಗೆ 12 ಲಕ್ಷರೂ.ನಿಂದ 1 ಕೋಟಿ ರೂಗೆ, ವೀರ ಚಕ್ರ ಪ್ರಶಸ್ತಿ 8 ಲಕ್ಷದಿಂದ 50 ಲಕ್ಷ ರೂಪಾಯಿ, ಶೌರ್ಯ ಚಕ್ರ 8 ಲಕ್ಷದಿಂದ 50 ಲಕ್ಷ ರೂ. ಸೇನಾ ಮೆಡಲ್ 2 ಲಕ್ಷದಿಂದ 15 ಲಕ್ಷ ರೂ. ಗೆ ಹೆಚ್ಚಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆದೇಶ ಹೊರಡಿಸಿದ್ದಾರೆ.
ಹೆಣ್ಣುಮಕ್ಕಳ ವಿವಾಹದ ವಯಸ್ಸು 18 ರಿಂದ 21ಕ್ಕೆ ಏರಿಕೆ : ಕೇಂದ್ರ ಸಂಪುಟ ಅನುಮೋದನೆ – Vishwanews24
