ಸೊರಕೆ ಎದುರಿಸಲು ಸನ್ನಧವಾಗಿದ್ದಾರೆ ಕಾಪುವಿನಲ್ಲಿ ಆರು ಮಂದಿ ಪಕ್ಷೇತರ ಅಭ್ಯರ್ಥಿಗಳು…? Exclusive News
ಕಾಪು: ಹೌದು ಕರ್ನಾಟಕ ವಿಧಾನ ಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದರೆ ಮತ್ತೊಂದೆಡೆ ಸೀಟಿಗಾಗಿ ಪೈಪೋಟಿಯು ಭಾರಿ ಜೋರಾಗಿಯೇ ನಡೆಯುತ್ತಿದೆ. ಇದರ ನಡುವೆ ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಕೂಡ ಕಾಂಗ್ರೇಸ್ನ ಸೀಟ್ ವಿನಯ್ ಕುಮಾರ್ ಸೊರಕೆಗೆ ಪಕ್ಕಾವಾಗಿದ್ದರೂ ಬಿಜೆಪಿ ಮತ್ತು ಜೆಡಿಎಸ್ನಿಂದ ಇನ್ನೂ ಯಾರು ಅನ್ನುವುದೆ ಯಕ್ಷ ಪ್ರಶ್ನೇಯಾಗಿದೆ. ಆದರೇ ಸೊರಕೆಯ ಈ ಭಾರಿಯ ಕಾಮಾಗಾರಿ ಹಾಗೂ ಕಾರ್ಯ ವೈಖರಿಯನ್ನ ನೋಡಿದರೆ ಮತ್ತೋಮ್ಮೆ ಕಾಪುವಿನಲ್ಲಿ ಶಾಸಕರಾಗಿ ಹೊರಹೊಮ್ಮುವುದು ಗ್ಯಾರಂಟಿ ಎನ್ನುವ ಮಾತು ಕೇಳಿ ಬರುತ್ತಿದೆ . ಆದರೇ ಈ ಸಲ ಸೊರಕೆಯನ್ನ ಸೋಲಿಸಬೇಕೆಂದೆ ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಆರು ಮಂದಿ ಹೊಸ ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ಕಾಂಗ್ರೇಸ್ನ ಜಾತಿ ಧರ್ಮದ ಓಟ್ ಬ್ಯಾಂಕ್ ಒಡೆಯಲು ಪ್ರತ್ಯೇಕ ಆರು ಜಾತಿಯ ಮುಖಂಡರು ಈ ಭಾರಿಯ ಚುನಾವಣ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತು ಕೆಲವು ದಿನಗಳ ಹಿಂದೆಯೇ ಸುದ್ದಿಯಾಗಿತ್ತು ಆದರೆ ಇವತ್ತು ಅದು ಜಿಲ್ಲೆಯ ಖಾಸಾಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ನಿರ್ಧಾರವಾಗಿ ಹೊರಹೊಮ್ಮಿದೆ. ಹೇಗಾದರೂ ಮಾಡಿ ಸೊರಕೆಯನ್ನು ಕಾಪು ಕ್ಷೇತ್ರದಲ್ಲಿ ಸೋಲಿಸಿ ಬೇಕೆಂಬ ಹಠ ಹಿಡಿದಿರುವ ಪಕ್ಷೇತರ ಅಭ್ಯರ್ಥಿಗಳ ಮತಪ್ರಚಾರ ಹಾಗೂ ಮನೆಮನೆ ಭೇಟಿ ಆದಿತ್ಯವಾರದಿಂದಲೇ ಶುರುವಾಗಲಿದೆಯೆಂಬ ಮಾಹಿತಿ ಲಭ್ಯವಾಗಿದೆ.
ಒಟ್ಟಾರೆಯಾಗಿ ಈ ಭಾರಿಯ ಚುನಾವಣೆ ಯಾವ ಪಕ್ಷಕ್ಕೆ ಗದ್ದುಗೆ ತಂದು ಕೊಡುತ್ತದೆ ಎಂಬುದರ ಜೊತೆಗೆ ಸೊರಕೆಯನ್ನ ಸೋಲಿಸಲು ಸನ್ನಧರಾಗಿರುವ ಈ ಆರು ಮಂದಿ ಪಕ್ಷೇತರ ಅಭ್ಯರ್ಥಿಗಳ ಮತಬ್ಯಾಂಕ್ ಲೆಕ್ಕಾಚಾರ ಯಾವ ರೀತಿ ಫಲ ಕೊಡುತ್ತದೆ ಎಂಬುದನ್ನ ಕಾದು ನೋಡಬೇಕಾಗಿದೆ.

