ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಋಣ ತೀರಿಸದೇ ಇದ್ರೆ ತಿನ್ನೋ ಅನ್ನಕ್ಕೆ ಹುಳ ಬೀಳುತ್ತೆ : ರಮೇಶ್ ಕುಮಾರ್ – Vishwanews24
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಋಣ ತೀರಿಸೋ ಸಂದರ್ಭ ಬಂದಿದೆ, ಅವರ ಋಣ ತೀರಿಸದೇ ಇದ್ರೆ ತಿನ್ನೋ ಅನ್ನಕ್ಕೆ ಹುಳ ಬೀಳುತ್ತೆ : ರಮೇಶ್ ಕುಮಾರ್
ಬೆಂಗಳೂರು: ಜವಾಹರ್ ಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಹೆಸರಿನಲ್ಲಿ ಹಣ ಆಸ್ತಿ ಮಾಡಿಕೊಂಡಿದ್ದೇವೆ, ಈಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಋಣ ತೀರಿಸುವ ಸಂದರ್ಭ ಬಂದಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿರುವುದನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ಮಾತನಾಡಿದ ರಮೇಶ್ ಕುಮಾರ್ ಅವರು ‘ನೆಹರು, ಇಂದಿರಾ ಹೆಸ್ರಲ್ಲಿ ಹಣ-ಆಸ್ತಿ ಮಾಡಿಕೊಂಡಿದ್ದೇವೆ, ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಈಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಋಣ ತೀರಿಸೋ ಸಂದರ್ಭ ಬಂದಿದೆ. ಅವರ ಋಣ ತೀರಿಸದೇ ಇದ್ರೆ ತಿನ್ನೋ ಅನ್ನಕ್ಕೆ ಹುಳ ಬೀಳುತ್ತೆ’ ಎಂದು ತಿಳಿಸಿದ್ಧಾರೆ.
ಸೋನಿಯಾ, ರಾಹುಲ್ ಗಾಂಧಿ ಶಕ್ತಿ ಮುಂದೆ ನಾವೆಲ್ಲಾ ಶೂನ್ಯ, ನೆಹರು, ಇಂದಿರಾ, ರಾಜೀವ್ ಗಾಂಧಿ ಹೆಸರಲ್ಲಿ ಸಾಕಷ್ಟು ಮಾಡಿಕೊಂಡಿದ್ದೇವೆ, ನಾವೆಲ್ಲಾ ಗಾಂಧಿ ಕುಟುಂಬದ ಪರವಾಗಿ ಹೋರಾಡೋಣ. ಗಾಂಧಿ ಕುಟುಂಬದ ಋಣಸಂದಾಯಕ್ಕೆ ಈ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಪ್ರತಿಭಟನೆಯಲ್ಲಿ ರಮೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
