ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಮಾಡುವಂತೆ ಸಿಎಂಗೆ ಕುಟುಂಬ ಸದಸ್ಯರ ಮನವಿ – Vishwanews24
ಸೌಜನ್ಯ ಕೇಸ್ ಮರು ತನಿಖೆ ಮಾಡುವಂತೆ ಸಿಎಂಗೆ ಕುಟುಂಬ ಸದಸ್ಯರ ಮನವಿ
ಬೆಂಗಳೂರು: ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಮಾಡುವಂತೆ ಸೌಜನ್ಯ ಕುಟುಂಬ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದಾರೆ.
ಬುಧವಾರ ಸಂಜೆ ಸೌಜನ್ಯ ಕುಟುಂಬ ಸದಸ್ಯರು ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮರು ತನಿಖೆ ನಡೆಸುವಂತೆ ಮನವಿ ಮಾಡಿದರು.
