ಸೌದಿ ಅರೇಬಿಯಾದಲ್ಲಿ ಕಾರು ಅಪಘಾತ : ಕಾಪುವಿನ ಯುವಕ ಸಾವು – Vishwanews24

Featured, ಉಡುಪಿ

ಸೌದಿ ಅರೇಬಿಯಾದಲ್ಲಿ ಕಾರು ಅಪಘಾತ : ಕಾಪುವಿನ ಯುವಕ ಸಾವು

ಸೌದಿ ಅರೇಬಿಯಾದಲ್ಲಿ ನಡೆದ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಡುಪಿ ಕಾಪು ನಿವಾಸಿ ಯುವಕ ಜುಬೈಲ್ ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ರಿಯಾಝ್ ಅವರಿಗೆ ಮಾ.25ಕ್ಕೆ ಜುಬೈಲ್ ನಲ್ಲಿ ಅಪಘಾತವಾಗಿತ್ತು.ಗಂಭೀರವಾಗಿದ್ದ ಅವರ ಮೆದುಳು ನಿಷ್ಕ್ರಿಯಗೊಂಡಿದ್ದು, ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು.ಇಂದು ವೆಂಟಿಲೇಟರ್ ನಿಂದ ತೆಗೆದಾಗ ಚೇತರಿಕೆ ಕಾಣದೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸದ್ದಾರೆ. ರಿಯಾಝ್ ಅವರಿಗೆ ಮೂರು ವರ್ಷಗಳ ಹಿಂದೆ ವಿವಾಹವಾಗಿತ್ತು.ಮೃತದೇಹದ ಅಂತ್ಯಸಂಸ್ಕಾರ ಸೌಧಿಯಲ್ಲೇ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

 

Leave a Reply