ಸ್ನೇಹಿತನೊಂದಿಗೆ ಜಾತ್ರೆಗೆ ಬಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ;  3 ಆರೋಪಿಗಳ ಬಂಧನ – Vishwanews24

Featured, ರಾಜ್ಯ ನ್ಯೂಸ್

ಸ್ನೇಹಿತನೊಂದಿಗೆ ಜಾತ್ರೆಗೆ ಬಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ;  3 ಆರೋಪಿಗಳ ಬಂಧನ

ತುಮಕೂರು: ತುಮಕೂರಿನ ಜಾತ್ರೆಗೆ ಸ್ನೇಹಿತನೊಂದಿಗೆ ಬಂದಿದ್ದ ಬಾಲಕಿ ನಂತರ ಪಕ್ಕದಲ್ಲಿಯೇ ಇದ್ದ ಬೆಟ್ಟದ ಬಳಿಗೆ ಮಾತನಾಡಲು ಹೋಗಿದ್ದಾರೆ. ಇವರನ್ನು ಹಿಂಬಾಲಿಸಿಕೊಂಡು ಹೋದ ಕಿಡಿಗೇಡಿಗಳು ಅವರು ಕುಳಿತಿದ್ದ ವಿಡಿಯೋವನ್ನು ಮಾಡಿ ತೋರಿಸಿ ಬೆದರಿಸಿದ್ದಾರೆ. ನಂತರ, ಬಾಲಕಿಯನ್ನು ಎಳೆದೊಯ್ದು ಮನೆಯೊಂದರಲ್ಲಿ ಕೂಡಿಹಾಕಿ ಅತ್ಯಾಚಾರ ಮಾಡಿದ್ದಾರೆ.

ಉಡುಪಿ: ಹಿಂದುಗಳ ಭಾವನೆಗೆ ನಿರಂತರವಾಗಿ ಧಕ್ಕೆ ತರಲಾಗುತ್ತಿದೆ : ಯಶ್ಪಾಲ್ ಸುವರ್ಣ – Vishwanews24

ಜಾತ್ರೆಗೆ ಸಾವಿರಾರು ಜನರು ಆಗಮಿಸುತ್ತಾರೆ. ಈ ವೇಳೆ ಮಹಿಳೆಯರು, ಯುವತಿಯರು ಹಾಗೂ ಬಾಲಕಿಯರಿಗೆ ಬೆಟ್ಟದ ಕಡೆಗೆ ಹೋಗದಂತೆ ಪೊಲೀಸು ನಿಗಾವಹಿಸಿರುತ್ತಾರೆ. ಆದರೂ, ಪೊಲೀಸರ ಕಣ್ಣು ತಪ್ಪಿಸಿ ಹೋಗುವವರ ಸಂಖ್ಯೆಯೂ ಹೆಚ್ಚಿದೆ. ಹೀಗೆ, ತನ್ನ ಬಾಯ್‌ಫ್ರೆಂಡ್‌ನೊಂದಿಗೆ ಜಾತ್ರೆಗೆ ಬಂದ ಬಾಲಕಿಯೂ ಕೂಡ ಬೆಟ್ಟದ ಬಳಿ ಹೋಗಿ ಮಾತನಾಡಲು ಕುಳಿತಿದ್ದಾರೆ. ಅವರನ್ನು ಹಿಂಬಾಲಿಸಿಕೊಂಡು ಹೋಗಿ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದು ಅದನ್ನು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ. ನಂತರ, ಆಕೆಯ ಸ್ನೇಹಿತನ ಮೇಲೆ ಹಲ್ಲೆ ಮಾಡಿ ಯುವತಿಯನ್ನು ಬಂಡೇಪಾಳ್ಯದ ಮನೆಯೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.

ಅಯೋಧ್ಯೆಯಲ್ಲಿ ರಾಮನ ದರ್ಶನದ  ಸಮಯದಲ್ಲಿ ತಮಗಾದ ವಿಶೇಷ ಅನುಭವದ ಬಗ್ಗೆ ತಿಳಿಸಿದ  ರಕ್ಷಿತ್ ಶೆಟ್ಟಿ- Vishwanews24

ಇನ್ನು ಬಾಲಕಿ ಅಪ್ರಾಪ್ತಳಾಗಿದ್ದು, ಅವರು ಸಮೂಹಿಕ ಅತ್ಯಾಚಾರ ಮಾಡುವ ವಿಡಿಯೋವನ್ನು ಕೂಡ ಮೊಬೈಲ್‌ನಲ್ಲಿ ರೆಕಾರ್ಟ್‌ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನಂತರ, ಯುವತಿಗೆ ನಿನ್ನ ವಿಡಿಯೋ ಬಿಡುಗಡೆ ಮಾಡುವುದಾಗಿ ಹಾಗೂ ಹಲ್ಲೆ ಮಾಡುವುದಾಗಿ ಬೆದರಿಸಿ ಅಲ್ಲಿಂದ ಕಳಿಸಿದ್ದಾರೆ. ತೀವ್ರ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಪೋಷಕರು ವಿಚಾರಣೆ ಮಾಡಿದಾದ ಸಾಮೂಹಿಕ ಅತ್ಯಾಚಾರ ಆಗಿರುವುದನ್ನು ಹೇಳಿದ್ದಾಳೆ. ಕೂಡಲೇ, ಪೋಷಕರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಾಮೂಹಿಕ ಅತ್ಯಾಚಾರದ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ಶೋಧ ಕಾರ್ಯ ಆರಂಭಿಸಿದ್ದಾರೆ. ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಈ ಪ್ರಕರಣದ ಸಂಬಂಧ ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ಬಂಡೆಪಾಳ್ಯದಲ್ಲಿ ವಾಸವಿದ್ದ ಅಮೋಘ, ಹನುಮಂತ, ಪ್ರತಾಪ್ ಎಂಬಾತನನ್ನ ಪೊಲೀಸರು ಬಂಧಿಸಿ ಜೈಲಿಹಟ್ಟಿದ್ದಾರೆ. ಇನ್ನು ಪ್ರಕರಣ ಸಂಬಂಧ ಪೊಲೀಸರಿಂದ ತನಿಖೆ ಮುಂದುವರಿದಿದೆ.

ರಾಜ್ಯದಲ್ಲಿ ಆ್ಯಸಿಡ್‌ ಮಾರಾಟ ನಿಷೇಧಿಸಲಾಗುವುದು: ಡಾ.ಜಿ.ಪರಮೇಶ್ವರ್‌ – Vishwanews24

Leave a Reply