ಸ್ವಾಭಿಮಾನಕ್ಕೆ ಧಕ್ಕೆಯಾದರೆ ಇವತ್ತೇ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ : ಎಂಪಿ ರೇಣುಕಾಚಾರ್ಯ -Vishwanews24
ಬೆಂಗಳೂರು: ಸ್ವಾಭಿಮಾನಕ್ಕೆ ಧಕ್ಕೆಯಾದರೆ ಇವತ್ತೇ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ..ಇದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಪ್ತ ಎಂಪಿ ರೇಣುಕಾಚಾರ್ಯ ಬಹಿರಂಗವಾಗಿ ವ್ಯಕ್ತಪಡಿಸಿದ ಅಸಮಾಧಾನ!
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತವರಿಗೆ ಮಂತ್ರಿಗಿರಿ ಯಾಕೆ ಕೊಡಬೇಕಿತ್ತು..ಅದರ ಬದಲು ಗೆದ್ದವರಿಗೆ ಸ್ಥಾನ ಕೊಡಬಹುದಿತ್ತಲ್ಲಾ ಎಂದು ಹೇಳಿದರು.
ನನ್ನ ಅಸಮಾಧಾನ ಮುಖ್ಯಮಂತ್ರಿ ಯಡಿಯೂರಪ್ಪನವರಾಗಲಿ, ಪಕ್ಷದ ಬಗ್ಗೆ ಅಲ್ಲ ಎಂದು ಈ ಸಂದರ್ಭದಲ್ಲಿ ಸಮಜಾಯಿಷಿ ನೀಡಿದರು. ಪಕ್ಷದಲ್ಲಿ ಕೆಲಸ ಮಾಡಿ ಗೆದ್ದವರಿಗೆ ಸ್ಥಾನ ಕೊಡುವುದಿಲ್ಲ. ಸೋತವರಿಗೆ ಸಚಿವ ಸ್ಥಾನ ಕೊಡುತ್ತಾರೆ ಎಂದು ಪರೋಕ್ಷವಾಗಿ ಲಕ್ಷ್ಮಣ ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ನನ್ನ ಉಸಿರು ಇರುವವರೆಗೆ ಯಡಿಯೂರಪ್ಪ ಜೊತೆಗೆ ಇರುತ್ತೇನೆ. ನನಗೆ ನನ್ನ ಕ್ಷೇತ್ರದ ಜನತೆ ಮುಖ್ಯ. ಇಂತಹ ಜನತೆಯ ಜನಪ್ರತಿನಿಧಿಯಾಗಿರುವ ನನಗೆ, ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೇ ಇವತ್ತೇ ರಾಜೀನಾಮೆ ಕೊಡುತ್ತೇನೆ ಎಂದು ಬಹಿರಂಗವಾಗಿಯೇ ಬಿಜೆಪಿ ವಿರುದ್ಧ ಆಕ್ರೋಶ, ಅಸಮಾಧಾನವನ್ನು ವ್ಯಕ್ತ ಪಡಿಸಿದರು.
