ಹರೀಶ್ ಪೂಂಜಾರ ಮೇಲೆ ತಲವಾರ್ ದಾಳಿ ಯತ್ನ : ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮಕೈಗೊಳ್ಳುವಂತೆ ಹಿಂದು ಜಾಗರಣ ವೇದಿಕೆ ಆಗ್ರಹ – VIshwanews24
ಹರೀಶ್ ಪೂಂಜಾರ ಮೇಲೆ ತಲವಾರ್ ದಾಳಿ ಯತ್ನ : ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮಕೈಗೊಳ್ಳುವಂತೆ ಹಿಂದು ಜಾಗರಣ ವೇದಿಕೆ ಆಗ್ರಹ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಅ. 13ರ ತಡರಾತ್ರಿ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಪರಂಗಪೇಟೆ ಪಡೀಲ್ ಎಂಬಲ್ಲಿ ಕಾರನ್ನು ಅಡ್ಡಗಟ್ಟಿ ತಲವಾರು ತೋರಿಸಿ ಜೀವ ಬೆದರಿಕೆಯೊಡ್ಡಿದ ಪ್ರಕರಣದ ಕುರಿತಂತೆ ಹಿಂದು ಜಾಗರಣ ವೇದಿಕೆ ಖಂಡನೆ ವ್ಯಕ್ತಪಡಿಸಿದೆ.
ಮಂಗಳೂರು ವಿಮಾನ ನಿಲ್ದಾಣದಿಂದ ಬಂಟ್ವಾಳ ತಲುಪಿದ್ದ ಹರೀಶ್ ಪೂಂಜರವರ ಕಾರನ್ನು ಬೆನ್ನಟ್ಟಿ ಬಿಳಿ ಸ್ಕಾರ್ಫಿಯೋ ಕಾರಿನಲ್ಲಿದ್ದ ಕಿಡಿಗೇಡಿಗಳು ಪರಂಗಿಪೇಟೆಯಲ್ಲಿ ಅಡ್ಡಗಟ್ಟಿ ಜೀವ ಬೆದರಿಕೆಯೊಡ್ಡಿರುವುದಕ್ಕೆ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹ ಸಂಯೋಜಕ ಸಮಿತ್ರಾಜ್ ದರೆಗುಡ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮಕೈಗೊಳ್ಳುವಂತೆ ಅವರು ಆಗ್ರಹಿಸಿ ತಪ್ಪಿದ್ದಲ್ಲಿ ಸಂಘಟನೆಯಿಂದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
