‘ಹಲೋ ಕಂದಾಯ ಸಚಿವರೇ ಸಹಾಯವಾಣಿ’ ಲೋಕರ್ಪಣೆ : ಪಿಂಚಣಿ ಸೌಲಭ್ಯ ಪಡೆಯುವುದು ಹೇಗೆ ? -Vishwanews24
‘ಹಲೋ ಕಂದಾಯ ಸಚಿವರೇ ಸಹಾಯವಾಣಿ’ ಲೋಕರ್ಪಣೆ
72 ಗಂಟೆಗಳಲ್ಲಿ ಮನೆ ಬಾಗಿಲಲ್ಲಿ ಪಿಂಚಣಿ
ಈ ಪಿಂಚಣಿ ಸೌಲಭ್ಯ ಪಡೆಯುವುದು ಹೇಗೆ ?
ಗ್ರಾಮ ಲೆಕ್ಕಾಧಿಕಾರಿಗಳು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಲ್ಲಿಸಬೇಕಾದ ದಾಖಲೆಗಳು
ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವದ 72 ಗಂಟೆಗಳಲ್ಲಿ ಸರ್ಕಾರದಿಂದ ಮನೆ ಬಾಗಿಲಿಗೆ ಪಿಂಚಣಿ ಸೇವೆಯ ಭಾಗವಾದ ಹಲೋ ಕಂದಾಯ ಸಚಿವರೇ ಸಹಾಯವಾಣಿ ಲೋಕರ್ಪಣೆ ಮಾಡಲಾಯಿತು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೋಕ್ರಿಂದ ಸಹಾಯವಾಣಿ ಲೋಕಾರ್ಪಣೆ ಮಾಡಿದರು
ಪಿಂಚಣಿ ಸೌಲಭ್ಯ ಪಡೆಯುವುದು ಹೇಗೆ?
ನಾಗರಿಕರು ಶುಲ್ಕ ರಹಿತ ಸಂಖ್ಯೆ 155245ಗೆ ಉಚಿತವಾಗಿ ದೂರವಾಣಿ ಮೂಲಕ ಕಡ್ಡಾಯವಾಗಿ ತಮ್ಮ ಆಧಾರ್ ಸಂಖ್ಯೆ ಒದಗಿಸಿ ಪಿಂಚಣಿ ಸೌಲಭ್ಯ ಕೋರಿಕೆ ಸಲ್ಲಿಸಬಹುದು
ತಮ್ಮ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆ ಬಾಗಿಲಿಗೆ ಭೇಟಿ ನೀಡಿ `ನವೋದಯ’ ಮೊಬೈಲ್ ಆಯಪ್ ಮೂಲಕ ಅರ್ಜಿದಾರರಿಂದ ಮಾಹಿತಿ ಹಾಗೂ ದಾಖಲಾತಿಗಳ ಸಂಗ್ರಹ.
ಗ್ರಾಮ ಲೆಕ್ಕಾಧಿಕಾರಿಗಳು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಲ್ಲಿಸಬೇಕಾದ ದಾಖಲೆಗಳು
ಕಡ್ಡಾಯವಾಗಿ ಆಧಾರ್ ಕಾರ್ಡ್
ಬ್ಯಾಂಕ್/ ಅಂಚೆ ಖಾತೆ ವಿವರದ ಪ್ರತಿ
ವಿಳಾಸ ಮತ್ತು ವಯಸ್ಸಿಗೆ ಸಂಬಂಧಿಸಿದ ದಾಖಲಾತಿ (ಪಡಿತರ ಚೀಟಿ, ಚುನಾವಣೆ ಗುರುತಿನ ಚೀಟಿ ಅಥವಾ ಸರ್ಕಾರ ವಿತರಿಸಿದ ಗುರುತಿನ ಚೀಟಿ)
ಮೊಬೈಲ್ ಆಯಪ್ ಮೂಲಕ ಭಾವಚಿತ್ರ ಸೆರೆಹಿಡಿಯವುದು
ಅರ್ಹರಿಗೆ 72 ಗಂಟೆಯೊಳಗೆ ನಾಡ ಕಚೇರಿ ಉಪ ತಹಸೀಲ್ದಾರರಿಂದ ಪಿಂಚಣಿ ಮಂಜೂರಾತಿ ಅನುಮೋದನೆ
ಫಲಾನುಭವಿಗಳ ಮನೆಬಾಗಿಲಿಗೆ ಪಿಂಚಣಿ ಮಂಜೂರಾತಿ ಆದೇಶ ವಿತರಣೆ ಮಾಡಲಾಗುವುದು.
ಆಸಿಡ್ ಸಂತ್ರಸ್ತರ ಮಾಸಾಶನ 3 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಳ : ಸಿಎಂ ಬೊಮ್ಮಾಯಿ ಘೋಷಣೆ – Vishwnaews24
