ಹಾರ್ಮುಜ್ ಜಲಸಂಧಿ ದಾಟಿ 26,000 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತು ಮಂಗಳೂರು ಬಂದರು ತಲುಪಿದ ‘ಶಿವಾಲಿಕ್’ ಹಡಗು – vishwanews24
ಹಾರ್ಮುಜ್ ಜಲಸಂಧಿ ದಾಟಿ 26,000 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತು ಮಂಗಳೂರು ಬಂದರು ತಲುಪಿದ ‘ಶಿವಾಲಿಕ್’ ಹಡಗು
ಮಂಗಳೂರು: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆ 26,000 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತ ಶಿವಾಲಿಕ್ ಹಡಗು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ನವ ಮಂಗಳೂರು ಬಂದರಿನ ಎಲ್ಪಿಜಿ ಟರ್ಮಿನಲ್ಗೆ ಬಂದು ತಲುಪಿದೆ.
ಒಟ್ಟು 46,000 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತಿದ್ದ ಶಿವಾಲಿಕ್ ನೌಕೆಯು, ಹಾರ್ಮುಜ್ ಜಲಸಂಧಿಯ ಮೂಲಕ ಪ್ರಯಾಣಿಸಿ ಮಾರ್ಚ್ 16 ರಂದು ಗುಜರಾತ್ನ ಮುಂದ್ರಾ ಬಂದರನ್ನು ತಲುಪಿತ್ತು. ಅಲ್ಲಿ 20,000 ಮೆಟ್ರಿಕ್ ಟನ್ ಅನಿಲವನ್ನು ಇಳಿಸಿದ ನಂತರ, ಬಾಕಿ ಉಳಿದ 26,000 ಮೆಟ್ರಿಕ್ ಟನ್ ಎಲ್ಪಿಜಿ ಯನ್ನು ಹೊತ್ತು ಇದೀಗ ಮಂಗಳೂರು ಬಂದರಿಗೆ ತಲುಪಿದೆ.
ಇದನ್ನೂ ಓದಿ:
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಆರ್ಡರ್ ಮಾಡಿದ್ದ ಎಲ್ಪಿಜಿಯನ್ನು ಈ ನೌಕೆಯು ಸಾಗಿಸುತ್ತಿದೆ. ಈ ಎಲ್ಪಿಜಿ ತೈಲ ಟ್ಯಾಂಕರ್ ಹೊತ್ತ ಹಡಗು ಮಾರ್ಚ್ ಮೊದಲ ವಾರದಲ್ಲಿ ಟ್ಯಾಂಕರ್ ಕತಾರ್ನ ರಾಸ್ ಲಫಾನ್ ಆಂಕಾರೇಜ್ನಿಂದ ಹೊರಟಿತ್ತು.
ಯುದ್ಧಪೀಡಿತ ಹಾರ್ಮುಜ್ ಜಲಸಂಧಿಯನ್ನು ಎಲ್ಪಿಜಿ ಟ್ಯಾಂಕರ್ ಹೊತ್ತ ಶಿವಾಲಿಕ್ ಮತ್ತು ನಂದಾದೇವಿ ಈ ಮೊದಲು ಹಾರ್ಮುಜ್ ಜಲಸಂಧಿಯನ್ನು ದಾಟಲು ಸಾಧ್ಯವಾಗಿರಲಿಲ್ಲ. ಆದರೆ, ಇರಾನ್ ಸರ್ಕಾರವು ಭಾರತೀಯ ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿ ನೀಡಿದ ನಂತರ, ಈ ಎರಡು ಹಡಗುಗಳು ತಮ್ಮ ಪ್ರಯಾಣವನ್ನು ಪುನರಾರಂಭಿಸಿ ಈಗ ಭಾರತವನ್ನು ತಲುಪಿವೆ.
ಇದನ್ನೂ ಓದಿ:
ಪಡುಬಿದ್ರಿ: ಕೋಟ್ಯಾಂತರ ರೂ. ಸೈಬರ್ ಕ್ರೈಮ್ ಪ್ರಕರಣ: ಆರೋಪಿ ಬಂಧನ – vishwanews24
