ಹಾಲು ಒಡೆದು ಹೋದರೆ ಅದನ್ನು ಮತ್ತೆ ಉಪಯೋಗಿಸಿಕೊಳ್ಳುವುದು ಹೇಗೆ..? ಓದಿ ಈ ವರದಿ Vishwanews24
ಹಾಲು ಒಡೆದು ಹೋಗೋದು ಸಾಮಾನ್ಯ ಸಂಗತಿ. ಚಳಿಗಾಲ, ಮಳೆಗಾಲ, ಬೇಸಿಗೆ ಕಾಲ…ಕಾಲ ಯಾವುದಾದ್ರೂ ಒಂದಿಲ್ಲೊಂದು ಕಾರಣಕ್ಕೆ ಹಾಲು ಒಡೆಯುತ್ತಲೇ ಇರುತ್ತೆ. ಜನ ಹಾಲು ಒಡೆದೋಯ್ತು ಅಂತಾ ಚೆಲ್ಲುತ್ತಾರೆ. ಒಡೆದ ಹಾಲನ್ನು ಬೀಸಾಡಬೇಕಿಲ್ಲ. ಆ ಹಾಲನ್ನೂ ಉಪಯುಕ್ತ ಆಗಿಸಿಕೊಳ್ಳಬಹುದು. ಕುದಿಸಿದ ಹಾಲಾಗಿರಲಿ, ತಣ್ಣಗಿನ ಹಾಲಿರಲಿ, ಒಡೆದ ಹಾಲಾಗಿರಲಿ ಎಲ್ಲದರಲ್ಲೂ ಬಹಳಷ್ಟು ಪೋಷಕಾಂಶವಿರುತ್ತದೆ.
ಇದು ಕೆಲವರಿಗೆ ತಿಳಿದಿಲ್ಲ. ಹಾಗಾಗಿ ಒಡೆದ ಹಾಲನ್ನು ಅನೇಕರು ಚೆಲ್ಲಿಬಿಡ್ತಾರೆ. ಆದರೆ ಒಡೆದ ಹಾಲನ್ನು ಹೊರ ಹಾಕುವ ಬದಲು ಅದರಿಂದ ಏನೆಲ್ಲಾ ಪ್ರಯೋಜನ ಇದೇ ಎಂಬುದನ್ನು ನಾವಿಂದು ನಿಮಗೆ ತಿಳಿಸುತ್ತೇವೆ.

ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ: ಒಡೆದ ಹಾಲಿನ ನೀರಿನಲ್ಲಿ ಪ್ರೋಟೀನ್ಗಳ ಪ್ರಮಾಣವು ತುಂಬಾ ಹೆಚ್ಚಾಗಿದೆ. ಈ ನೀರಿನು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ನೀರಿನಿಂದ ಸ್ನಾಯುವಿನ ಶಕ್ತಿಯು ಹೆಚ್ಚಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಬೆಳೆಸುತ್ತದೆ. ಈ ನೀರಿನಲ್ಲಿ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವೂ ಇದೆ ಮತ್ತು ಅದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಣ: ಒಡೆದ ಹಾಲಿನ ನಿಯಮಿತ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು ಎಂದು ಹಲವು ಸಂಶೋಧನೆಯಿಂದ ತಿಳಿದುಬಂದಿದೆ. ಕೊಲೆಸ್ಟರಾಲ್ ನಿಯಂತ್ರಣದಲ್ಲಿದ್ದರೆ, ಹೃದಯಾಘಾತ ಮತ್ತು ಸ್ಟ್ರೋಕ್ ನಂತಹ ಕಾಯಿಲೆಗಳಿಂದ ದೂರವಿರಬಹುದು.
ಹಿಟ್ಟು ಮೃದುವಾಗಲು ಸಹಾಯಕ: ನೀವು ಚಪಾತಿ, ರೊಟ್ಟಿ ಹಿಟ್ಟನ್ನು ಕಲಸುವಾಗ ಈ ಒಡೆದ ಹಾಲಿನ ನೀರನ್ನು ಬಳಸುವುದರಿಂದ ಅದು ಮೃದುವಾಗುವುದಲ್ಲದೆ, ರುಚಿ ಕೂಡಾ ಹೆಚ್ಚಾಗುತ್ತದೆ. ಇದರೊಂದಿಗೆ ನೀವು ಸಾಕಷ್ಟು ಪ್ರೋಟೀನ್ ಗಳನ್ನೂ ಸಹ ಪಡೆಯುತ್ತೀರಿ. ಒಡೆದ ಹಾಲಿನ ನೀರನ್ನು ವಿವಿಧ ರೀತಿಯ ಭಕ್ಷ್ಯ ತಯಾರಿಸಲು ಬಳಸಲಾಗುತ್ತದೆ. ಹಾಲು ರಕ್ತ ಪರಿಚಲನೆಗೆ ಉತ್ತಮವಾಗಿರುತ್ತದೆ, ಆದ್ದರಿಂದ ಚರ್ಮದ ಜೀವಕೋಶಗಳು ಆರೋಗ್ಯಕರವಾಗಿರುತ್ತವೆ.

ಮುಖದ ಸೌಂದರ್ಯಕ್ಕೂ ಉಪಯುಕ್ತ: ಒಡೆದ ಹಾಲಿನ ನೀರಿಗೆ ಕಡಲೆಹಿಟ್ಟು, ಅರಿಶಿನ ಮತ್ತು ಗಂಧದ ಪುಡಿ ಸೇರಿಸಿ ನಿಮ್ಮ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
ರಸ್ ಗುಲ್ಲಾ ಮತ್ತು ಬರ್ಫಿ : ಒಂದು ಒಣಗಿದ ಪಾತ್ರೆಗೆ ಒಡೆದ ಹಾಲನ್ನು ಹಾಕಿ. ಅವಶ್ಯಕತೆಗೆ ತಕ್ಕಷ್ಟು ಸಕ್ಕರೆಯನ್ನು ಹಾಕಿ. ನೀರು ಆರುವವರೆಗೆ ಇದನ್ನು ಬಿಸಿ ಮಾಡಿ. ಕೊನೆಯಲ್ಲಿ ಉಳಿಯುವ ಕಣಕದಿಂದ ರಸ್ ಗುಲ್ಲಾ ಅಥವಾ ಬರ್ಫಿ ತಯಾರಿಸಿ.
ಪನ್ನೀರ್: ಒಡೆದ ಹಾಲನ್ನು ಚೆನ್ನಾಗಿ ಕುದಿಸಿ. ನಂತ್ರ ಸ್ವಚ್ಛವಾಗಿರುವ ಬಟ್ಟೆಯೊಳಗೆ ಒಡೆದ ಹಾಲನ್ನು ಹಾಕಿ ಬಿಗಿಯಾಗಿ ಕಟ್ಟಿಡಿ. ಕೆಲ ಗಂಟೆಗಳಲ್ಲಿ ಪನ್ನೀರು ಸಿದ್ಧವಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಪನ್ನೀರಿಗಿಂತ ಇದು ತಾಜಾ ಹಾಗೂ ಮೃದುವಾಗಿರುತ್ತದೆ.
ಮೊಸರು : ಒಡೆದ ಹಾಲನ್ನು ಮೊಸರು ಮಾಡಿ ತಿನ್ನಬಹುದು. ಒಡೆದ ಹಾಲಿಗೆ ಸ್ವಲ್ಪ ಮೊಸರು ಹಾಕಿಟ್ಟರೆ ಮೊಸರಿನ ರುಚಿ ಹೆಚ್ಚಾಗುತ್ತದೆ. ಸೂಪ್ ಮಾಡ್ತಾ ಇದ್ದರೆ ನೀರಿನ ಬದಲು ಒಡೆದ ಹಾಲಿನ ನೀರನ್ನು ಬಳಸಬಹುದು. ಇದು ಸೂಪ್ ರುಚಿಯನ್ನು ಹೆಚ್ಚಿಸುತ್ತದೆ.
ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಪೀಠಂ.
ಜಾತಕ ವಿಮರ್ಶಕರು.
ಸಚ್ಚಿಂತನೆಯ ಜೋತಿಷ್ಯರು ಶ್ರೀ ಗಣಪತಿ ಭಟ್.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,
ನಿಮ್ಮ ಸಮಸ್ಯೆಗಳಾದ, ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ
ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ,
ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ,
ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ವಶೀಕರಣ,
ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ
ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 8088827292
