ಹಾಸನ :  ಫ್ಲೈ ಓವರ್ ಮೇಲೆ ಪೆಟ್ರೋಲ್‌ ಟ್ಯಾಂಕರ್‌ ಪಲ್ಟಿ ; ವಾಹನ ಸಂಚಾರ ಸ್ಥಗಿತ – vishwanews24

Featured, ರಾಜ್ಯ ನ್ಯೂಸ್

ಹಾಸನ :  ಫ್ಲೈ ಓವರ್ ಮೇಲೆ ಪೆಟ್ರೋಲ್‌ ಟ್ಯಾಂಕರ್‌ ಪಲ್ಟಿ ; ವಾಹನ ಸಂಚಾರ ಸ್ಥಗಿತ

ಹಾಸನ: ನಗರದ ಹೊರವಲಯದಲ್ಲಿರುವ ಕೆಂಚಟ್ಟಹಳ್ಳಿ ಬಳಿಯ ಫ್ಲೈಓವರ್  ಮೇಲೆ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಉರುಳಿ ಬಿದ್ದಿದೆ. ಪೆಟ್ರೋಲ್‌ ಹರಿದು ಹೋಗುತ್ತಿದ್ದು, ರಸ್ತೆಯಲ್ಲಿ ಸಂಚಾರ ಬಂದ್‌ ಮಾಡಲಾಗಿದೆ.

ಪೆಟ್ರೋಲ್‌ ಹರಿದು ಹೋಗುತ್ತಿದ್ದು, ಬಿಸಿಲು ಹೆಚ್ಚಾಗಿರುವುದರಿಂದ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಯಿದೆ. ವೀಕೆಂಡ್, ಗೌರಿ – ಗಣೇಶ ಹಬ್ಬ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದೆ.

ಇದನ್ನೂ ಓದಿ: 

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬೆಳ್ತಂಗಡಿಯ ಉಷಾರಾಣಿ ನೇಮಕ – vishwanews24

 

ಸ್ಥಳಕ್ಕೆ ಪೊಲೀಸರು ಅಗ್ನಿಶಾಮಕದಳದ ಸಿಬ್ಬಂದಿ ದೌಡಾಯಿಸಿದ್ದು ಪೆಟ್ರೋಲ್ ಮೇಲೆ ನೀರು ಹಾಕುತ್ತಿದ್ದಾರೆ. ಸೋರುತ್ತಿರುವ ಪೆಟ್ರೋಲ್‌ನ್ನು ನಿಯಂತ್ರಣಕ್ಕೆ ತರುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಕೊಂಡಿದ್ದಾರೆ. ಫ್ಲೈಓವರ್ ಮೇಲೆ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ.

ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ವಾಹನ ಸವಾರರು ಪರದಾಡುತ್ತಿದ್ದಾರೆ. ಟ್ರಾಫಿಕ್ ನಿಯಂತ್ರಿಸಲು ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ತಮಿಳುನಾಡಿನಿಂದ ಹಾಸನದ ಹೆಚ್‌ಪಿಸಿಎಲ್‌ಗೆ ಟ್ಯಾಂಕರ್‌ ಬರುತ್ತಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: 

ಪರವಾನಗಿ ಇಲ್ಲದ ಅಕ್ರಮ ಬಂದೂಕು ನ.1ರೊಳಗೆ ಒಪ್ಪಿಸಲು ಸೂಚನೆ; ತಪ್ಪಿದರೆ ಕಠಿಣ ಕ್ರಮ : ಸಿಎಂ ಎಚ್ಚರಿಕೆ  – vishwanews24

Leave a Reply