ಹಾಸನ: ಬೇಲೂರು ಚನ್ನಕೇಶವ ರಥೋತ್ಸವದಲ್ಲಿ ಕುರಾನ್ ಪಠಣೆ ವೇಳೆ ಹಿಂದೂ ಸಂಘಟನೆಗಳಿಂದ  ಜೈ ಶ್ರೀರಾಮ ಘೋಷಣೆ – Vishwanews24

Featured, ರಾಜ್ಯ ನ್ಯೂಸ್

ಹಾಸನ: ಬೇಲೂರು ಚನ್ನಕೇಶವ ರಥೋತ್ಸವದಲ್ಲಿ ಕುರಾನ್ ಪಠಣೆ ವೇಳೆ ಹಿಂದೂ ಸಂಘಟನೆಗಳಿಂದ  ಜೈ ಶ್ರೀರಾಮ ಘೋಷಣೆ

ಹಾಸನ: ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೆ ಮಂಗಳವಾರ ನಡೆದಿದ್ದು, ಈ ಸಂದರ್ಭದಲ್ಲಿ ವಾರ್ಷಿಕವಾಗಿ ನಡೆಯುವ ಗೌರವ ವಂದನೆ ಸ್ವೀಕಾರ ಸಂಪ್ರದಾಯವನ್ನು ಪಾಲನೆ ಮಾಡಲಾಗಿದೆ. ಸಾಮಾನ್ಯವಾಗಿ ಈ ವೇಳೆ ಕುರಾನ್ ಪಠಣ ನಡೆಸುತ್ತಿದ್ದರೂ ಈ ಬಾರಿ ಮುಸ್ಲಿಂ ಖಾಜಿಗಳು ಕೇವಲ ಶ್ಲೋಕ ಪಠಣಕ್ಕೆ ಸೀಮಿತಗೊಳಿಸಿದ್ದಾರೆ. ಈ ವೇಳೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜೋರಾಗಿ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದಾರೆ.

ಬೆಳಗ್ಗೆ ಸುಮಾರು 10:50ಕ್ಕೆ ವಾಡಿಕೆಯಂತೆ ಖಾಜ ಸಾಹೇಬರು ದೇವಸ್ಥಾನದ ಮೂಲೆಯ ಮೆಟ್ಟಿಲ ಮೇಲೆ ಶ್ಲೋಕ ಪಠಿಸಿದ ನಂತರ ತೇರು ಎಳೆಯಲಾಯಿತು. ಈ ವೇಳೆ ಸ್ಥಳೀಯ ಶಾಸಕ ಕೆಎಸ್ ಲಿಂಗೇಶ್, ಮಾಜಿ ಸಚಿವ ಹೆಚ್‌ಡಿ ರೇವಣ್ಣ, ದೇವಸ್ಥಾನದ ಆಡಳಿತಾಧಿಕಾರಿ ವಿದ್ಯುಲ್ಲತಾ, ಸೇರಿದಂತೆ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ್ರೆ 2ಬಿ ಮೀಸಲಾತಿ ಜಾರಿ : ಹೆಚ್.ಡಿ. ರೇವಣ್ಣ  – Vishwanews24

ಕುರಾನ್ ಪಠಣ ವಿವಾದದಿಂದ ಚನ್ನಕೇಶವಸ್ವಾಮಿ ರಥೋತ್ಸವಕ್ಕೆ  ಹಲವು ಅಡಚಣೆಗಳು ಎದುರಾಗಿದ್ದವು. ಇದರ ನಡುವೆಯೂ ಮಂಗಳವಾರದಿಂದ ಜಾತ್ರಾ ಮಹೋತ್ಸವ ಆರಂಭವಾಗಿದೆ. ರಥೋತ್ಸವದ ವೇಳೆ ಕುರಾನ್ ಪಠಣ ಮಾಡದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜೈ ಶ್ರೀರಾಮ್ ಘೋಷಣೆ ಕೂಗಿದರು.

ಸೋಮವಾರ ಸಂಜೆ ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಕುರಾನ್ ಪಠಣ ಮಾಡುವ ಸುತ್ತಲೂ ಬ್ಯಾರಿಕೇಡ್ ಹಾಕಿ ಅರೆ ಮಿಲಿಟರಿ ಕಾರ್ಯಪಡೆ ಹಾಗೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತಿ ವರ್ಷ ರಥದ ಮುಂದೆ ಕುರಾನ್ ಪಠಣ ಮಾಡಲಾಗುತ್ತಿತ್ತು. ಆದರೆ ಈ ಭಾರಿ ವಿರೋಧ ವ್ಯಕ್ತವಾದ್ದರಿಂದ ದೇವಾಲಯದ ಹೊರಭಾಗದ ಮೂಲೆಯಲ್ಲಿ ಮೆಟ್ಟಿಲ ಮೇಲೆ ಬೇಲೂರು ತಾಲೂಕಿನ ದೊಡ್ಡ ಮೇದೂರು ಗ್ರಾಮದ ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ ಶ್ಲೋಕ ಓದಿದರು.

ಅನಿತಾ ಕುಮಾರಸ್ವಾಮಿ ಅವರು ರಾಜಕೀಯಕ್ಕೆ ಬಂದಿದ್ದು ಪಕ್ಷ ಉಳಿಸಲಿಕ್ಕೆ : ಹೆಚ್. ಡಿ ಕುಮಾರಸ್ವಾಮಿ – Vishwanews24

Leave a Reply