ಹಾಸನ : ಹಾಡಹಗಲೇ ಗುಂಡಿನ ದಾಳಿ ; ಇಬ್ಬರು ಮೃತ್ಯು – vishwanews24

Featured, ರಾಜ್ಯ ನ್ಯೂಸ್

ಹಾಸನ : ಹಾಡಹಗಲೇ ಗುಂಡಿನ ದಾಳಿ – ಇಬ್ಬರು ಮೃತ್ಯು

ಹಾಸನ: ಹಾಸನದಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆದಿದ್ದು ಇಬ್ಬರು ಮೃತಪಟ್ಟಿದ್ದಾರೆ. ಹಾಸನದ ಹೊಯ್ಸಳ‌ ನಗರ ಬಡಾವಣೆಯಲ್ಲಿ ಗುರುವಾರ ಫೈರಿಂಗ್ ನಡೆದಿದೆ. ದಾಳಿಯಲ್ಲಿ ಒಬ್ಬ ವ್ಯಕ್ತಿಯ ಹತ್ಯೆಯಾಗಿದ್ದು ಮತ್ತೊಬ್ಬರು ಮೃತಪಟ್ಟಿದ್ದಾರೆ.

ಒಬ್ಬ ವ್ಯಕ್ತಿಯ ಶವ ಕಾರಿನ ಒಳಗೆ ಕಂಡುಬಂದಿದ್ದು, ಕಾರಿನ ಹೊರಗಡೆ ಮತ್ತೊಂದು ಶವ ಪತ್ತೆಯಾಗಿದೆ. ಆಸ್ತಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಎಸ್​ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಎಫ್​ಎಸ್​​ಎಲ್​ ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ. ಹಾಸನದ ಕೆಆರ್ ಪುರಂ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಬಿಜೆಪಿ ಅವರು ಸೈಕಲ್ ತುಳಿಯಲಿ ಆರೋಗ್ಯಕ್ಕೆ ಒಳ್ಳೆಯದು : ಬಿಜೆಪಿ ಸೈಕಲ್ ಪ್ರತಿಭಟನೆಗೆ ಎಂ.ಬಿ ಪಾಟೀಲ್ ಲೇವಡಿ – vishwanews24

Leave a Reply