ಹಿಂಜಾವೇಯ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆ ಪ್ರಕರಣದ ಆರೋಪಿ ಚರಣ್ ರಾಜ್‌ ರೈ ಕೊಲೆ: vishwanews24

Featured, ಉಡುಪಿ

ಹಿಂಜಾವೇಯ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆ ಪ್ರಕರಣದ ಆರೋಪಿ ಚರಣ್ ರಾಜ್‌ ರೈ ಕೊಲೆ: vishwanews24

ಪುತ್ತೂರು: ಹಿಂದು ಜಾಗರಣ ವೇದಿಕೆಯ ಕಾರ್ಯದರ್ಶಿಯಾಗಿದ್ದ ಕಾರ್ತಿಕ್ ಸುವರ್ಣ ಮೇರ್ಲ ಕೊಲೆ ಪ್ರಕರಣದ ಆರೋಪಿಗಳ ಪೈಕಿ ಆರ್ಯಾಪು ನಿವಾಸಿ ಚರಣ್ ರೈ  ಅವರನ್ನು‌ ದುಷ್ಕರ್ಮಿಗಳು ಪೆರ್ಲಂಪಾಡಿ ರಸ್ತೆ ಬದಿಯಲ್ಲಿ ಕೊಲೆ ಮಾಡಿದ್ದಾರೆ.

                              ಅಜಿತ್ ಪೆರ್ಲಾ

ಚರಣ್ ರೈ ಅವರಿಗೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಸಂಪ್ಯದಲ್ಲಿ ಗಣೇಶೋತ್ಸವದ ವೇಳೆ ಯಕ್ಷಗಾನ ವೀಕ್ಷಿಸುತ್ತಿದ್ದಾಗ ಕಾರ್ತಿಕ್ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು.

    ಇಂದು ಕೊಲೆಯಾದ ಚರಣ್ ರಾಜ್ ರೈ

ಈ ಕೊಲೆ ಪ್ರಕರಣದಲ್ಲಿ ಸಂಪ್ಯದ ಚರಣ್ ರೈ, ಕಿರಣ್ ರೈ, ಮಂಗಳೂರಿನ ಪ್ರೀತಂ ಶೆಟ್ಟಿ ಮತ್ತು ಅವರಿಗೆ ಆಶ್ರಯ ನೀಡಿದ್ದ ಮಂಗಳೂರಿನ ಮೊಂತೆರೋ ಅರೆಸ್ಟ್ ಆಗಿದ್ದರು.

ನ್ಯಾಯಾಲಯದ ವಿಚಾರಣೆಯಲ್ಲಿ ಚರಣ್ ರೈ, ಕಿರಣ್ ರೈ, ಮೊಂತೆರೋ ಜಾಮೀನು ಪಡೆದು ಹೊರ ಬಂದಿದ್ದರು. ಚರಣ್ ರೈ ಅವರು ಪೆರ್ಲಂಪಾಡಿಯಲ್ಲಿ ನೂತನ ಮೆಡಿಕಲ್ ಶಾಪ್ ಆರಂಭಿಸುವ ಕುರಿತು ಪೆರ್ಲಂಪಾಡಿಗೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

Leave a Reply