ಹಿಂದೂ ಕಾರ್ಯಕರ್ತರ ಮೇಲೆ ಪೋಲಿಸ್ ದೌರ್ಜನ್ಯ : ಪಿಎಸ್ಐ, ಪಿಸಿ ಅಮಾನತು – Vishwanews24

Featured, ದಕ್ಷಿಣ ಕನ್ನಡ

ಹಿಂದೂ ಕಾರ್ಯಕರ್ತರ ಮೇಲೆ ಪೋಲಿಸ್ ದೌರ್ಜನ್ಯ : ಪಿಎಸ್ಐ, ಪಿಸಿ ಅಮಾನತು: ಪುತ್ತೂರು ಡಿ ವೈ ಎಸ್‌ ಪಿ ವಿರುದ್ಧ ಶಿಸ್ತುಕ್ರಮ – Vishwanews24

ಪುತ್ತೂರು: ಬ್ಯಾನರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಒಳಗಾದ ಯುವಕರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದ್ದು‌, ದೌರ್ಜನ್ಯಕ್ಕೊಳಗಾದ ಯುವಕ ಅವಿನಾಶ್ ತಂದೆ ವೇಣುನಾಥ ನರಿಮೊಗರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಡಿ ವೈ ಎಸ್ ಪಿ ಪುತ್ತೂರು ಗ್ರಾಮಾಂತರ ಠಾಣೆ ಪಿಎಸ್ಐ, ಪುತ್ತೂರು ಗ್ರಾಮಾಂತರ ಠಾಣೆಯ ಪಿಸಿ ಹರ್ಷಿತ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಸಿಆರ್‌ಪಿಸಿ 39/23 u/s 323,324,506 r/w 34IPC ಸೆಕ್ಷನ್ ಪ್ರಕಾರ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆಯನ್ನು ಬಂಟ್ವಾಳ ಡಿವೈಎಸ್ಪಿ ಗೆ ವಹಿಸಲಾಗಿದೆ . ಈ ನಡುವೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ವಿಚಾರಣೆ ವರದಿ ಆಧಾರದ ಮೇಲೆ ಪುತ್ತೂರು ಗ್ರಾಮಾಂತರ ಠಾಣೆ ಪಿಎಸ್ಐ ಹಾಗೂ ಪಿಸಿ ಹರ್ಷಿತ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪುತ್ತೂರು ಡಿವೈಎಸ್ಪಿ ವಿರುದ್ಧ ಸೂಕ್ತ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲು ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ.

ಪುತ್ತೂರು : ಅರುಣಣ್ಣ ಠಾಣೆಗೆ ಬರದೇ ಇರುತ್ತಿದ್ದರೆ ಲಾಕಪ್ ಡೆತ್ ಆಗುತ್ತಿತ್ತು : ಹಲ್ಲೆಗೊಳಗಾದ ಕಾರ್ಯಕರ್ತರು – Vishwanews24

Leave a Reply