ಹಿಜಬ್ ಧರಿಸುವುದು ಮೂಲಭೂತ ಹಕ್ಕು, ಅದು ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದೆ : ಸಿದ್ದರಾಮಯ್ಯ – Vishwanews24
ಕೇಸರಿ ಶಾಲು ಹಾಕೋದು ಯಾವಾಗಿಂತ ಬಂತು? ನಿನ್ನೆ, ಮೊನ್ನೆಯಿಂದ ಬಂದಿದೆ..
ಹಿಜಬ್ ಮೊದಲಿನಿಂದಲೂ ಹಾಕುತ್ತಿದ್ದರು..
ಕರಾವಳಿಯು ಸಂಘ ಪರಿವಾರದ ಕೋಮುವಾದದ ಪ್ರಯೋಗಾಲಯವಾಗಿದೆ..
ಬೆಂಗಳೂರು: ಹಿಜಬ್ ಧರಿಸುವುದು ಮೂಲಭೂತ ಹಕ್ಕು. ಅದು ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಉಡುಪಿ ಸರ್ಕಾರಿ ಪಿಯು ಕಾಲೇಜಿನಲ್ಲಿ ತಲೆದೋರಿರುವ ಹಿಜಬ್-ಕೇಸರಿ ಶಾಲು ವಿವಾದ ಕುರಿತು ಮಾತನಾಡಿದ ಸಿದ್ದರಾಮಯ್ಯ, ಸಮವಸ್ತ್ರ ಕಡ್ಡಾಯ ಅಂತ ಸರ್ಕಾರ ಎಲ್ಲೂ ಹೇಳಿಲ್ಲ. ಪಿಯುಸಿ ಲೆವೆಲ್‌ನಲ್ಲಿ ಇಲ್ಲಾ. ಮುಸ್ಲಿಂ ಹೆಣ್ಣು ಮಕ್ಕಳಿಗೆ ಗೇಟ್ ಹಾಕಿಕೊಂಡು ಬರಬೇಡಿ ಅಂತ ಪ್ರಿನ್ಸಿಪಾಲ್ ಹೇಳಿದ್ದಾರೆ. ಸರ್ಕಾರಿ ಕಾಲೇಜು ಅದು. ಅದು ಮೂಲಭೂತ ಹಕ್ಕಿನ ಉಲ್ಲಂಘನೆ. ಹಿಜಬ್ ಹಾಕುವುದು ಮೂಲಭೂತ ಹಕ್ಕು. ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈಗ ಅದು ನ್ಯಾಯಾಲಯದಲ್ಲಿದೆ, ಏನಾಗುತ್ತೆ ನೋಡೋಣ ಎಂದು ತಿಳಿಸಿದರು.
ಇದನ್ನೂ ಓದಿ :
ಯಾರೋ ಬಿಜೆಪಿಯವರು ಹೇಳಿ ಮಾಡಿಸುತ್ತಿದ್ದಾರೆ. ಇದು ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸವನ್ನು ತಡೆಯುವ ಪ್ರಯತ್ನ. ಸರ್ಕಾರಿ ಕಾಲೇಜಿನ ಪ್ರಿನ್ಸಿಪಾಲ್ ಹೆಣ್ಣುಮಕ್ಕಳನ್ನ ತಡೆದಿದ್ದು ಅಮಾನವೀಯ. ಕಣ್ಣೀರು ಹಾಕಿದರೂ ಬಿಡಲಿಲ್ಲ. ಅವನ್ಯಾವನೋ ಶಾಸಕ ರಘುಪತಿ ಬಟ್, ಅವನು ಹೇಳಿದನಂತೆ ಇವನು ತಡೆದನಂತೆ ಅವನು ಯಾರು ಹೇಳೋಕೆ ಯುನಿಫಾರ್ಮ್ ತನ್ನಿ ಅಂತ ಎಂದು ಏಕವಚನದಲ್ಲಿ ಕಿಡಿಕಾರಿದರು.
ಈ ಬೆಳವಣಿಗೆ ಸಂವಿಧಾನ ವಿರೋಧಿ ನಡೆ. ಕೇಸರಿ ಶಾಲು ಹಾಕಿಕೊಂಡು ಬಂದಿದ್ದರ ಉದ್ದೇಶ ಏನು? ಆ ಪ್ರಿನ್ಸಿಪಾಲ್‌ನ ಸಸ್ಪೆಂಡ್ ಮಾಡಬೇಕು. ಕೇಸರಿ ಶಾಲು ಮೊದಲಿನಿಂದ ಹಾಕ್ತಿದ್ರಾ? ಹಿಜಬ್ ಮೊದಲಿನಿಂದಲೂ ಹಾಕುತ್ತಿದ್ದರು. ಕೋರ್ಟ್‌ನಲ್ಲಿ ವಿಚಾರಣೆಯಿದೆ. ನಾನು ಲಾಯರ್, ಪ್ರತಿಪಕ್ಷ ನಾಯಕನಾಗಿಯೇ ಹೇಳುತ್ತಿದ್ದೇನೆ. ಕೇಸರಿ ಶಾಲು ಹಾಕೋದು ಯಾವಾಗಿಂತ ಬಂತು? ನಿನ್ನೆ, ಮೊನ್ನೆಯಿಂದ ಬಂದಿದೆ. ಹಿಜಬ್ ಹಿಂದಿನಿಂದಲೂ ಇದೆ. ಕರಾವಳಿಯು ಸಂಘ ಪರಿವಾರದ ಕೋಮುವಾದದ ಪ್ರಯೋಗಾಲಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ :
