ಹಿಜಾಬ್ ವಿವಾದ: ಅಲ್ಪಸಂಖ್ಯಾತ ಹೆಣ್ಮಕ್ಕಳು ಶಿಕ್ಷಣ ಪಡೆಯಲು ಆಗಬಾರದೆಂದು ಬಿಜೆಪಿಯವರು ಮಾಡಿದ ಷಡ್ಯಂತ್ರ : ಬಿ.ಕೆ.ಹರಿಪ್ರಸಾದ್ 

Featured, ರಾಜ್ಯ ನ್ಯೂಸ್

ಹಿಜಾಬ್​ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಸ್ವಾಗತ : ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ 

ಹಿಜಾಬ್ ವಿಚಾರವನ್ನು ಒಂದು ವಿವಾದವಾಗಿ ಬೆಳೆಸಿದ್ದೇ ಬಿಜೆಪಿ..

ಹಿಜಾಬ್ ವಿವಾದದಿಂದಾಗಿ 17,000 ಹೆಣ್ಣುಮಕ್ಕಳು ಶಾಲೆಗಳಿಂದ ಹೊರಗೆ ಬಂದಿದ್ದಾರೆ. .

ಬಡವರನ್ನು ಹಾಗೂ ಅಲ್ಪಸಂಖ್ಯಾತರನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವ ಷಡ್ಯಂತ್ರ..

ಚಿತ್ರದುರ್ಗ: ಹಿಜಾಬ್​ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸುವುದಾಗಿ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್  ಹೇಳಿದ್ದಾರೆ.

ಹಿಜಾಬ್ ವಿಚಾರವನ್ನು ಒಂದು ವಿವಾದವಾಗಿ ಬೆಳೆಸಿದ್ದೇ ಬಿಜೆಪಿ. ಇದು ಬಡವರನ್ನು ಹಾಗೂ ಅಲ್ಪಸಂಖ್ಯಾತರನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವ ಷಡ್ಯಂತ್ರ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.

ಜಿಲ್ಲೆಯ ಕೋನಸಾಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ ಹೆಣ್ಮಕ್ಕಳು ಶಿಕ್ಷಣ ಪಡೆಯಲು ಆಗಬಾರದೆಂದು ಬಿಜೆಪಿಯವರು ಮಾಡಿದ ಷಡ್ಯಂತ್ರ ಇದು. ಅವರು ಮುಂದಿಟ್ಟ ಹೆಜ್ಜೆ ಹಿಂದಕ್ಕೆ ತೆಗೆಯುವಂತೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಹಿಜಾಬ್ ವಿವಾದದಿಂದಾಗಿ 17,000 ಹೆಣ್ಣುಮಕ್ಕಳು ಶಾಲೆಗಳಿಂದ ಹೊರಗೆ ಬಂದಿದ್ದಾರೆ.

ಮಂಗಳೂರು : ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ನೇಮಕಾತಿ ಆದೇಶ ಪತ್ರ ಸ್ವೀಕರಿಸಿದ ಪ್ರವೀಣ್ ನೆಟ್ಟಾರು ಪತ್ನಿ ನೂತನ – Vishwanews24

ಸುಪ್ರೀಂಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಅದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದಾಗಿ ಹೇಳಿದ್ದಾರೆ. ಈ ವಿವಾದದಿಂದ ಯಾರಿಗೂ ಯಾವುದೇ ಒಳಿತು ಆಗುವುದಿಲ್ಲ. ಬಡ, ಅಲ್ಪಸಂಖ್ಯಾತ ಹೆಣ್ಣು ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಇರಬಾರದು ಎಂಬ ಷಡ್ಯಂತ್ರ ಅವರದು. ಹಲವು ಮುಸ್ಲಿಂ ಕುಟುಂಬಗಳ ಮೊದಲ ತಲೆಮಾರು ಶಿಕ್ಷಣ ಕ್ಷೇತ್ರದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ಆರೋಪ ಮಾಡಿದರು. ಈಗ ಶಾಲೆಗಳಿಂದ ಹೊರಬಂದಿರುವ ಹೆಣ್ಣುಮಕ್ಕಳ ತಂದೆ-ತಾಯಿ ಬಹಳ‌ ಕಷ್ಟಪಟ್ಟು ಶಾಲೆಗಳಿಗೆ ಕಳಿಸಿದ್ದರು. ಧರ್ಮ ಮತ್ತು ಸರ್ಕಾರ ಎರಡರ ಮಿಶ್ರಣ ಸಲ್ಲದು ಎನ್ನುವ ನೆಹರು ಅವರ ಮಾತನ್ನು ನಾವೆಲ್ಲರೂ ನೆನಪಿನಲ್ಲಿ ಇರಿಸಿಕೊಳ್ಳಬೇಕು ಎಂದು ಅವರು ವಿವರಿಸಿದರು.

Leave a Reply