ಹಿಜಾಬ್ ವಿವಾದ : ವಿಸ್ತೃತ ಪೀಠದ ತೀರ್ಪಿನ ಅಗತ್ಯವಿದೆ : ಪ್ರಮೋದ್ ಮುತಾಲಿಕ್ – Vishwanews24
ಹಿಜಾಬ್ ವಿವಾದ : ವಿಸ್ತೃತ ಪೀಠದ ತೀರ್ಪಿನ ಅಗತ್ಯವಿದೆ : ಪ್ರಮೋದ್ ಮುತಾಲಿಕ್
ಬೆಂಗಳೂರು : ಹಿಜಾಬ್ ವಿವಾದದ ಕುರಿತು ನ್ಯಾಯಮೂರ್ತಿಗಳ ವಿಭಿನ್ನ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಹಿಜಾಬ್ ವಿವಾದವನ್ನು ಸಿಜೆಐ ಪೀಠಕ್ಕೆ ವರ್ಗಾವಣೆ ಮಾಡಿ ಆದೇಶಿಸಿದೆ. ಈ ಕುರಿತು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದದ ಕುರಿತು ನ್ಯಾಯಮೂರ್ತಿಗಳ ವಿಭಿನ್ನ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಹಿಜಾಬ್ ವಿವಾದವನ್ನು ಸಿಜೆಐ ಪೀಠಕ್ಕೆ ವರ್ಗಾವಣೆ ಮಾಡಿದೆ. ಈ ವಿಚಾರದಲ್ಲಿ ವಿಸ್ತೃತ ಪೀಠ ದ ತೀರ್ಪಿನ ಅಗತ್ಯವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಪರಿಣಾಮ ಬೀರಿದೆ. ಸುಪ್ರೀಂಕೋರ್ಟ್ ಏನೆ ತೀರ್ಪು ನೀಡಿದ್ರೂ ಸ್ವಾಗತಿಸುತ್ತೇನೆ. ಯಾವುದೇ ತೀರ್ಪು ಕೊಟ್ಟರೂ ಎಲ್ಲರೂ ಸ್ವಾಗತಿಸಬೇಕು. ಈ ದೇಶ ಕುರಾನಿನ ಆಧಾರದ ಮೇಲೆ ನಡೆಯುತ್ತಿಲ್ಲ. ಈದೇಶ ಸಂವಿಧಾನದ ಆಧಾರದ ಮೇಲೆ ನಡೆಯುತ್ತಿದೆ ಎಂದಿದ್ದಾರೆ.

