ಹುಕ್ಕಾ ಬಾರ್ ಮೇಲೆ ದಾಳಿ: ಬಿಗ್‌ಬಾಸ್ ವಿಜೇತ ಮುನಾವರ್ ಫಾರೂಕಿ ಸೇರಿ 14 ಮಂದಿ ವಶಕ್ಕೆ – Vishwanews24
ಹುಕ್ಕಾ ಬಾರ್ ಮೇಲೆ ದಾಳಿ: ಬಿಗ್‌ಬಾಸ್ ವಿಜೇತ ಮುನಾವರ್ ಫಾರೂಕಿ ಸೇರಿ 14 ಮಂದಿ ವಶಕ್ಕೆ
ಮುಂಬಯಿ: ಮುಂಬೈನ ಹುಕ್ಕಾ ಪಾರ್ಲರ್ ಮೇಲೆ ಪೊಲೀಸರು ದಾಳಿ ನಡೆಸಿ, ಬಿಗ್ ಬಾಸ್ ವಿಜೇತ ಮುನಾವರ್ ಫಾರೂಕಿ ಸೇರಿದಂತೆ 14 ಮಂದಿಯನ್ನು ವಶಕ್ಕೆ ಪಡೆದಿರುವ ಘಟನೆ ಮುಂಬಯಿಯಲ್ಲಿ ನಡೆದಿರುವುದಾಗಿ ಎಎನ್ ಐ ವರದಿ ತಿಳಿಸಿದೆ.
ನಗರದ ಕೋಟೆ ಪ್ರದೇಶದ ಹುಕ್ಕಾ ಪಾರ್ಲರ್ ನ್ನು ಅಕ್ರಮವಾಗಿ ನಡೆಸಲಾಗುತ್ತಿತ್ತು, ಮಂಗಳವಾರ ನಡೆದ ಈ ದಾಳಿಯಲ್ಲಿ 4,400 ನಗದು ಮತ್ತು 13,500 ಮೌಲ್ಯದ ಒಂಬತ್ತು ಹುಕ್ಕಾ ಪಾಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳವಾರ ರಾತ್ರಿ 10.30ರ ಸುಮಾರಿಗೆ ದಾಳಿ ನಡೆಸಿದ್ದು, ಬುಧವಾರ ಬೆಳಗಿನ ಜಾವ 5 ಗಂಟೆಯವರೆಗೆ ದಾಳಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಳ್ತಂಗಡಿ : 9 ತಿಂಗಳ ಮಗುವಿನೊಂದಿಗೆ ತಾಯಿ ನಾಪತ್ತೆ – Vishwanews24
ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಇನ್ನೂ ಸ್ಥಳದಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
