ಹುಷಾರ್…ಬ್ಲೂವೇಲ್‍ಗಿಂತಲೂ ಡೇಂಜರಸ್ ಮೊಮೊ ಸೂಸೈಡ್ ಗೇಮ್..!

Featured, ರಾಷ್ಟ್ರ ನ್ಯೂಸ್

ನವದೆಹಲಿ:,-ಅನೇಕರನ್ನು ಬಲಿ ತೆಗೆದುಕೊಂಡ ಬ್ಲೂವೇಲ್ ಗೇಮ್ ಹಾವಳಿ ಕಡಿಮೆಯಾಗಿ ಜನರ ನಿರಾಶವಾಗುತ್ತಿರುವ ಸಂದರ್ಭದಲ್ಲೇ ಮತ್ತೊಂದು ಮಹಾಮಾರಿ ಆತಂಕ ಮೂಡಿಸಿದೆ. ಬ್ಲೂವೇಲ್‍ಗಿಂತಲೂ ಖತರ್ನಾಕ್ ಆಗಿರುವ ಇದರ ಹೆಸರು ಮೊಮೊ ಚಾಲೆಂಜ್. ವ್ಯಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಗೇಮ್‍ಗೆ ಆಹ್ವಾನಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಭಯಾನಕ ಗೇಮ್ ಇದಾಗಿದೆ.

ಮಕ್ಕಳು ಮತ್ತು ಯುವಜನಾಂಗಕ್ಕೆ ಇದರಿಂದ ದೊಡ್ಡ ಕಂಟಕವಾಗುವ ಭೀತಿ ಆವರಿಸಿದೆ. ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮೊಮೊ ಚಾಲೆಂಜ್‍ನ ಕಬಂಧ ಬಾಹುಗಳು ಚಾಚಿಕೊಂಡಿರುವುದು ಪೊಲೀಸರ ನಿದ್ದೆಗೆಡಿಸಿದೆ. ಕೀಕೀ ಡ್ಯಾನ್ಸ್ ಚಾಲೆಂಜ್‍ನಿಂದ ಜನರು ಕಿರಿಕಿರಿ ಅನುಭವಿಸುತ್ತಿರುವಾಗಲೇ ಮೊಮೊ ಭೂತದ ಆತಂಕದಿಂದ ಭಯಪಡುವಂತಾಗಿದೆ.  ದೊಡ್ಡ ಕಣ್ಣುಗುಡ್ಡೆಗಳು ಹೊರಬಂದಿರುವ ವಿಕಾರ ರೂಪದ ಮೊಮೊ ಹೆಸರಿನಲ್ಲಿ ಚಾಲೆಂಜ್ ಹಾಕುವ ಸಂದೇಶಗಳು ಮೊಬೈಲ್ ಫೋನ್‍ಗಳಲ್ಲಿ ಈಗಾಗಲೇ ಹರಿದಾಡುತ್ತಿವೆ. ಯಾವುದೇ ಒಂದು ಸ್ಥಳಕ್ಕೆ ಮಕ್ಕಳು ಅಥವಾ ಯುವಕ-ಯುವತಿಯರನ್ನು ಆಹ್ವಾನಿಸಿ ಸೂಸೈಡ್ ಗೇಮ್‍ಗಳಿಗೆ ಪ್ರಚೋದನೆ ನೀಡುವ ಭಯಾನಕ ಸೂಸೈಡ್ ಗೇಮ್ ಇದಾಗಿದೆ.

ವ್ಯಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಮಕ್ಕಳನ್ನು ಹೆದರಿಸಿ ಕಾಡುವ ಮೊಮೊ ಗುಮ್ಮ ಇದಾಗಿದೆ. ಈ ಚಾಲೆಂಜ್ ಸ್ವೀಕರಿಸಿ ಅದನ್ನು ಅನುಸರಿಸಿದರೆ ಬ್ಲೂವೇಲ್ ಆನ್‍ಲೈನ್ ಗೇಮ್‍ನಂತೆ ಜೀವ ಕಳೆದುಕೊಳ್ಳುವ ಸಾಧ್ಯತೆ ಇದೆ. ಕೇರಳ ರಾಜ್ಯದ ಅಳಪುಳದಲ್ಲಿ ನಿನ್ನೆಯಷ್ಟೇ ಮೊಮೊ ಹೆಸರಿನಲ್ಲಿ ಯುವಕನೊಬ್ಬನಿಗೆ ಸಂದೇಶವೊಂದು ರವಾನೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಆತಂಕದ ವಾತಾವರಣ ತಲೆದೋರಿತ್ತು. ಜಿಲ್ಲಾ ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಇಂಥ ಸಂದೇಶಗಳಿಗೆ ಹೆದರಬೇಡಿ. ಮೆಸೇಜ್‍ನಲ್ಲಿ ಹಾಕುವ ಸವಾಲುಗಳನ್ನು ಯಾವುದೇ ಕಾರಣಕ್ಕೂ ಅನುಸರಿಸಬೇಡಿ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಎಂದು ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.Momo-Challenge