ಹೆಚ್.ವಿಶ್ವನಾಥ್ ಅವರಿಗೆ ಯಾವ ಪಕ್ಷದಲ್ಲೂ ಇರೋಕೆ ಆಗಲ್ಲ : ಎಚ್.ಡಿ. ಕುಮಾರಸ್ವಾಮಿ -Vishwanews24
ಹೆಚ್.ವಿಶ್ವನಾಥ್ ಅವರಿಗೆ ಯಾವ ಪಕ್ಷದಲ್ಲೂ ಇರೋಕೆ ಆಗಲ್ಲ : ಎಚ್.ಡಿ. ಕುಮಾರಸ್ವಾಮಿ -Vishwanews24
ಅವರಿಗೆ ಬೇಕಿರೋದು ಅಧಿಕಾರ ಮತ್ತು ಹಣ…
ಮಂಡ್ಯ: ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರಿಗೆ ಯಾವ ಪಕ್ಷದಲ್ಲೂ ಇರೋಕೆ ಆಗಲ್ಲ. ಅವರಿಗೆ ಬೇಕಿರೋದು ಅಧಿಕಾರ ಮತ್ತು ಹಣ. ಅವರೆಡೂ ಸಿಗದಿದ್ದಾಗ ಎಲ್ಲರನ್ನೂ ಬೈಯುತ್ತಾ ಓಡಾಡುತ್ತಾರೆ. ನರಿಗೆ ದ್ರಾಕ್ಷಿ ಎಟಕದೇ ಇರುವಾಗ ಹುಳಿ ಎನ್ನುವುದಿಲ್ಲವೇ ಹಾಗೆ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಜೆಡಿಎಸ್ನಲ್ಲಿ ಕುಟುಂಬ ರಾಜಕೀಯ ಇದೆ ಅನ್ನೋದು ನಮ್ಮ ಪಕ್ಷದ ಅಭ್ಯರ್ಥಿ ಆಗುವ ಮೊದಲು ಎಚ್. ವಿಶ್ವನಾಥ್ಗೆ ಗೊತ್ತಿರಲಿಲ್ವ. ಇಡೀ ಜೆಡಿಎಸ್ ಪಕ್ಷ ದೇವೇಗೌಡರ ಕುಟುಂಬ. ವಿಶ್ವನಾಥ್ ಮಗ ಜಿ.ಪಂ ಸದಸ್ಯ ಅಲ್ಲವೇ? ಡಿಸಿಸಿ ಬ್ಯಾಂಕ್ ನಿರ್ದೇಶಕ ಅಲ್ಲವೇ? ಅದು ಕುಟುಂಬ ರಾಜಕೀಯ ಅಲ್ಲವೇ? ಇಡೀ ರಾಜ್ಯದಲ್ಲಿ ಯಾರೊಬ್ಬರಿಗೂ ಜೆಡಿಎಸ್ ಅನ್ನು ಕುಟುಂಬ ರಾಜಕಾರಣ ಎಂದು ಹೇಳುವ ನೈತಿಕತೆ ಇಲ್ಲ ಎಂದು ಗುಡುಗಿದರು.
