ಹೆಜಮಾಡಿ: ಅನಾರೋಗ್ಯದಿಂದ ಆರು ವರ್ಷದ ಬಾಲಕಿ ಮೃತ್ಯು – vishwanews24
ಹೆಜಮಾಡಿ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಆರು ವರ್ಷದ ಬಾಲಕಿ ಮೃತ್ಯು
ಪಡುಬಿದ್ರಿ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಆರು ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಹೆಜಮಾಡಿ ಎನ್.ಎಸ್. ರೋಡ್ ಬೇಂಗಲೆಯ ಕಲಂದರ್ ಹಾಗು ಮುಮ್ತಾಜ್ ದಂಪತಿಯ ಪುತ್ರಿ ಫಾತಿಮಾ ಮಾಹಿರಾ ಮೃತ ಬಾಲಕಿ.
ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಬೆಂಗಳೂರಿನ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಈಕೆ ಹೆಜಮಾಡಿಯ ವಿದ್ಯಾ ಪ್ರಸಾರ ಶಾಲೆಯಲ್ಲಿ ಎಲ್ ಕೆಜಿ ವಿದ್ಯಾರ್ಥಿನಿಯಾಗಿದ್ದಳು.
ಉಡುಪಿ: ಜು.26 ಮತ್ತು 27ರಂದು ಪ್ರಥಮ ಬಾರಿಗೆ ಸಂತೆಕಟ್ಟೆಯಲ್ಲಿ ಹಲಸು ಮೇಳ – vishwanews24
