ಹೆಜಮಾಡಿ ಟೋಲ್ ಗೇಟ್ ನಲ್ಲಿ ಸುರತ್ಕಲ್ ಟೋಲ್ ವಸೂಲಿ ವಿರೋಧಿಸಿ ಹೆಜಮಾಡಿಯಲ್ಲಿ ಧರಣಿ – Vishwanews24
ಹೆಜಮಾಡಿ ಟೋಲ್ ಗೇಟ್ ನಲ್ಲಿ ಸುರತ್ಕಲ್ ಟೋಲ್ ವಸೂಲಿ – ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಘೋಷಣೆ ವಿರೋಧಿಸಿ ಹೆಜಮಾಡಿಯಲ್ಲಿ ಧರಣಿ
ಟೋಲ್ ವಿಲೀನ ಆದೇಶ ರದ್ದುಗೊಳಿಸದಿದ್ದಲ್ಲಿ ಸುರತ್ಕಲ್ ಟೋಲ್ ಗೇಟ್ ವಿರುದ್ಧದ ಮಾದರಿಯಲ್ಲಿ ಹೋರಾಟ : ಮುನೀರ್ ಕಾಟಿಪಳ್ಳ
ಪಡುಬಿದ್ರೆ: ಸುರತ್ಕಲ್ ಟೋಲ್ ಗೇಟ್ ರದ್ದುಗೊಳಿಸಿರುವುದರ ಮಧ್ಯೆಯೇ ಇಲ್ಲಿನ ಟೋಲ್ ಅನ್ನು ಸೇರಿಸಿ ಹೆಜಮಾಡಿ ಟೋಲ್ ಗೇಟ್ ನಲ್ಲಿ ವಸೂಲಿ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಘೋಷಣೆಯನ್ನು ವಿರೋಧಿಸಿ ಇಂದು ಹೆಜಮಾಡಿಯಲ್ಲಿ ಧರಣಿ ನಡೆಯಿತು.
ಹೆಜಮಾಡಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿಂದು ಬೆಳಗ್ಗೆ ಹೆಜಮಾಡಿ ಟೋಲ್ ಗೇಟ್ ಬಳಿ ಧರಣಿ ನಡೆಸಲಾಯಿತು.
ಮಂಗಳೂರು ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ಪರ ವಕಾಲತ್ತು ಮಾಡಬೇಡಿ : ವಕೀಲರ ಸಂಘಕ್ಕೆ ಬಜರಂಗದಳ ಮನವಿ – Vishwanews24
ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಸುರತ್ಕಲ್ ಮಾತನಾಡಿ, ಟೋಲ್ ವಿಲೀನ ಆದೇಶ ರದ್ದುಗೊಳಿಸದಿದ್ದಲ್ಲಿ ಸುರತ್ಕಲ್ ಟೋಲ್ ಗೇಟ್ ವಿರುದ್ಧದ ಮಾದರಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶೇಖರ್ ಹೆಜಮಾಡಿ ಮೊದಲಾದವರು ಧರಣಿಗೆ ನೇತೃತ್ವ ವಹಿಸಿದ್ದರು.
