ಹೊಸ ಪಡಿತರ ಚೀಟಿ ವಿತರಣೆಗೆ ರಾಜ್ಯ ಸರ್ಕಾರ ಆದೇಶ – Vishwanews24
ಹೊಸ ಪಡಿತರ ಚೀಟಿ ವಿತರಣೆಗೆ ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ರಾಜ್ಯ ಸರ್ಕಾರದಿಂದ ಹೊಸ ಆದ್ಯತಾ ಪಡಿತರ ಚೀಟಿಯನ್ನುಕೋರಿ ಅರ್ಜಿಯನ್ನು ಸಲ್ಲಿಸಿರುವಂತ ಅರ್ಜಿಗಳಲ್ಲಿ 1.55 ಲಕ್ಷ ಅರ್ಜಿಗಳನ್ನು ಮಾನ್ಯಗೊಳಿಸಲಾಗಿದೆ. ಹೀಗೆ ಹೊಸ ಆದ್ಯತಾ ಪಡಿತರ ಚೀಟಿ ಸಲ್ಲಿಸಿದವರಿಗೆ ಪಡಿತರ ಚೀಟಿಗಳನ್ನು ವಿತರಿಸಲು ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ಎಲ್ಲಾ ಜಿಲ್ಲಾಧಿಕಾರಿಗಳಿ ಸೂಚಿಸಿರುವಂತ ಪ್ರತಿ ಕನ್ನಡ ನ್ಯೂಸ್ ನೌಗೆ ಲಭ್ಯವಾಗಿದೆ. ಅದರಲ್ಲಿ ರಾಜ್ಯದಲ್ಲಿ ಹೊಸದಾಗಿ ಆದ್ಯತಾ ಪಡಿತರ ಚೀಟಿ ಕೋರಿ ದಿನಾಂಕ 25-08-2022ರವರೆಗೆ 2,73,662 ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ 1,55,927 ಅರ್ಹ ಕುಟುಂಬಗಳಿಗೆ ಹೊಸ ಆದ್ಯತಾ ಪಡಿತರ ಚೀಟಿ ನೀಡುವ ಬಗ್ಗೆ ಜಿಲ್ಲೆಗಳಲ್ಲಿ ವರದಿ ಪಡೆದುಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ ಎಂದಿದೆ.
ಬಾಬಾಬುಡನ್ಗಿರಿ ಡಿ. 6, 7, 8 ರಂದು ದತ್ತ ಜಯಂತಿ ಆಚರಿಸಿಲು ಹೈಕೋರ್ಟ್ ಅನುಮತಿ -Vishwanews24
ಹೊಸದಾಗಿ ಆದ್ಯತಾ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವಂತ 2,73,662 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಅದ್ಯಾತಾ ಪಡಿತರ ಚೀಟಿಯನ್ನು ಹೊಂದಲು ಅರ್ಹರಿರುವ ಒಟ್ಟು 1,55,927 ಅರ್ಜಿದಾರರಿಗೆ ಹೊಸ ಆದ್ಯತಾ ಪಡಿತರ ಚೀಟಿಯನ್ನು ವಿತರಿಸಲು ಆದೇಶಿಸಿದೆ
