​ಧನುಸ್ಸು ರಾಶಿಯವರೇ ಕಾಡುವ ಜನರನ್ನು ನಿರ್ಲಕ್ಷಿಸಿ ;ನೋಡಿ ಇಂದಿನ ರಾಶಿ ಭವಿಷ್ಯ : ಶ್ರೀ ಗಣಪತಿ ಭಟ್ 8088827292 – Vishwanews24

Featured, ರಾಜ್ಯ ನ್ಯೂಸ್

 ಮಾರ್ಚ್‌ 4, ಬುಧವಾರದ ರಾಶಿಫಲ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

​ಮೇಷ ರಾಶಿ : ನಿಮ್ಮ ಮನೆಯಲ್ಲಿನ ಆಗುಹೋಗುಗಳ ಬಗ್ಗೆ ನೀವು ಲಕ್ಷ್ಯ ವಹಿಸಿ. ಇಲ್ಲದೆ ಹೋದರೆ ತೊಂದರೆಯನ್ನು ಎದುರು ಹಾಕಿಕೊಂಡಂತೆ. ಇಬ್ಬರ ವ್ಯಾಜ್ಯವನ್ನು ಬಗೆಹರಿಸಲು ಮಧ್ಯವರ್ತಿಯಾಗಿ ಹೋಗದಿರಿ. ಇದರಿಂದ ನೀವೇ ಅವಮಾನಕ್ಕೆ ಒಳಗಾಗುವ ಸಂಭವವಿದೆ.

​ವೃಷಭ ರಾಶಿ ; ಭಯವನ್ನೇ ಗೀಳಾಗಿಸಿಕೊಳ್ಳಬೇಡಿ. ಯೋಚನೆಯಿಂದ ಯಾವುದೇ ಪರಿಹಾರ ಕಂಡುಕೊಳ್ಳಲು ಆಗುವುದಿಲ್ಲ. ಹಾಗಾಗಿ ಯಾವುದಾದರೂ ಕೆಲಸ ಮಾಡುವತ್ತ ಗಮನ ಹರಿಸಿ. ಇಲ್ಲವೇ ನಿಮಗೆ ಇಷ್ಟವಾದ ಪುಸ್ತಕವನ್ನು ಓದಿ.

ಮಿಥುನ ರಾಶಿ:ಎಲೆಕ್ಟ್ರಿಕ್‌ ಉಪಕರಣಗಳಿಂದ ದೂರ ಇರುವುದು ಒಳ್ಳೆಯದು. ಉದರಕ್ಕೆ ಸಂಬಂಧಪಟ್ಟ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸೂಕ್ತ ವೈದ್ಯಕೀಯ ಉಪಚಾರ ನಡೆಸಿ. ಒಳಿತಾಗುವುದು. ಮಾತಾ ದುರ್ಗಾದೇವಿಯ ಆರಾಧನೆ ಮಾಡುವುದು ಒಳ್ಳೆಯದು.

​ಕಟಕ ರಾಶಿ:ಸದ್ಯದ ಗ್ರಹಸ್ಥಿತಿಗಳು ಉತ್ತಮವಾಗಿಲ್ಲದ ಕಾರಣ ನವಗ್ರಹ ದೇವತೆಗಳನ್ನು ಪ್ರಾರ್ಥಿಸುವುದು ಅನಿವಾರ್ಯ. ಪತಿ, ಪತ್ನಿಯರಲ್ಲಿ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದ್ದು, ಯಾರಾದರೂ ಒಬ್ಬರು ಮೌನ ತಾಳುವುದು ಒಳ್ಳೆಯದು.

​ಸಿಂಹ ರಾಶಿ:ಜಗದ ರೀತಿಯನ್ನು ಬದಲಾಯಿಸಲು ಆಗುವುದಿಲ್ಲಎಂಬ ಸತ್ಯವನ್ನು ಅರಿಯುವಿರಿ. ಜನಾರ್ದನನನ್ನು ಮೆಚ್ಚಿಸಬಹುದು, ಆದರೆ ಜನರನ್ನು ಮೆಚ್ಚಿಸಲು ಆಗುವುದಿಲ್ಲ. ಅಂತೆಯೇ ಜನರನ್ನು ಮೆಚ್ಚಿಸುವಂತಹ ಕಾರ್ಯಗಳನ್ನು ಸದ್ಯಕ್ಕೆ ಮುಂದೆ ಹಾಕಿ.

​ಕನ್ಯಾ ರಾಶಿ:ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎಂಬ ಸತ್ಯದ ಪರವಾಗಿ ಮಾತನಾಡಲು ಹಿಂಜರಿಯಬೇಡಿ. ಮಾತಿನ ಶಕ್ತಿಯನ್ನು ವೃದ್ಧಿಸಿಕೊಳ್ಳಿ. ಇದರಿಂದ ಅನೇಕ ಸಮಸ್ಯೆಗಳಿಂದ ದೂರವಾಗಬಹುದು. ವಿಷ್ಣಸಹಸ್ರನಾಮವನ್ನು ಪಾರಾಯಣ ಮಾಡಿ.

ತುಲಾ ರಾಶಿ:ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ನಿಮ್ಮಿಂದ ದೂರ ಇರುವ ವ್ಯಕ್ತಿಗಳು ಬಹುಸುಖವಾಗಿರುವರು ಎಂದು ಭಾವಿಸುವಿರಿ. ಆದರೆ ನೈಜ ಜೀವನದಲ್ಲಿಅವರು ನಿಮಗಿಂತಲೂ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವರು. ಹಾಗಾಗಿ ನಿಮ್ಮ ಕಷ್ಟ ನಗಣ್ಯವಾದದು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

​ವೃಶ್ಚಿಕ ರಾಶಿ:ಅಧಿಕವಾದ ಬಂಡವಾಳವನ್ನು ತೊಡಗಿಸಲು ಶತಪ್ರಯತ್ನ ನಡೆಸುತ್ತಿರುವಿರಿ. ಆದರೆ ಯಾವುದಕ್ಕೂ ಮಿತಿ ಇರಲಿ. ಮಾಯಾಕಾರಕ ರಾಹುವಿನ ಮಾಯೆಯನ್ನು ಅರಿಯುವುದು ಅಷ್ಟು ಸುಲಭವಲ್ಲ. ಹಾಗಾಗಿ ಯೋಚಿಸಿ ಬಂಡವಾಳ ಹೂಡುವುದು ಒಳ್ಳೆಯದು.

​ಧನುಸ್ಸು ರಾಶಿ:ಕಾಡುವ ಜನರನ್ನು ನಿರ್ಲಕ್ಷಿಸಿ. ಕೆಲವು ಜನರನ್ನು ದೂರದಿಂದಲೇ ಕೈಮುಗಿದು ಸಾಗಹಾಕುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಇಲ್ಲದ ಉಸಾಬರಿಯನ್ನು ಮೈಮೇಲೆ ಎಳೆದುಕೊಂಡಂತೆ ಆಗುವುದು.

​ಮಕರ ರಾಶಿ:ಜನ್ಮಶನಿಯು ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನುಂಟು ಮಾಡುತ್ತಿರುವನು. ಶ್ರೀರಾಮಚಂದ್ರನನ್ನು ಅನನ್ಯವಾಗಿ ಆರಾಧಿಸಿ. ಬಡವರಿಗೆ ಆಹಾರ ನೀಡಿ. ಹಣಕಾಸಿನ ವಿಷಯದಲ್ಲಿ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ.

​ಕುಂಭ ರಾಶಿ:ಹೊಸ ಕೆಲಸ ಸಿಗಬಹುದೆಂಬ ಕಾರಣಕ್ಕೆ ಎಲ್ಲವೂ ಬದಲಾಗದು. ಮಾಡುವ ಕೆಲಸಕ್ಕೆ ಹೊಸ ಜವಾಬ್ದಾರಿ ಅಂಟಿಕೊಳ್ಳುವುದು. ಆದರೆ ವರಮಾನ ಅಭಿವೃದ್ಧಿಗೆ ಇದು ಪೂರಕವಾಗುವುದು. ಇಷ್ಟದೇವರನ್ನು ಮನಸಾ ಭಜಿಸಿ.

ಜನ್ಮರಾಶಿಗೆ ತಕ್ಕಂತೆ ಯಾವ ಬಣ್ಣದ ವಾಹನ ಖರೀದಿಸಬೇಕು ಗೊತ್ತಾ? ಇಲ್ಲಿದೆ ಮಾಹಿತಿ..

​ಮೀನ ರಾಶಿ:ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ. ನಿಮ್ಮ ಕೈಕೆಳಗೆ ಕೆಲಸ ಮಾಡುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ಒಳಿತಾಗುವುದು. ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುವುದು. ಹಿರಿಯರ ಮಾರ್ಗದರ್ಶನದಂತೆ ನಡೆಯುವಿರಿ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292