ಅಂಬಿ ಅಂತ್ಯಕ್ರಿಯೆಯಲ್ಲಿ‌ ಭಾಗಿಯಾಗುವಾಗ ಕುಸಿದು ಬಿದ್ದ ಸುಮಲತಾ ಅಂಬರೀಶ್…

Featured, ರಾಜ್ಯ ನ್ಯೂಸ್

ಬೆಂಗಳೂರು :ರೆಬಲ್ ಸ್ಟಾರ್ ಅಂಬರೀಶ್ ಅವರ ಅಂತ್ಯಕ್ರಿಯೆ ಕಾರ್ಯಕ್ರಮ ಕಂಠೀರವ ಸ್ಟೂಡಿಯೋದಲ್ಲಿ‌ ನಡೆಯಲಿದ್ದು ,ಪಾರ್ಥಿವ ಶರೀರ ಚಿತೆಯ ಬಳಿ ಕರೆದುಕೊಂಡು ಬರುತ್ತಿರುವಾಗ ಅಂಬರೀಶ್ ಧರ್ಮಪತ್ನಿ‌ ಸುಮಲತಾ ಕುಸಿದು ಬಿದ್ದಿದ್ದಾರೆ,

ನಜಂಗುಳಿ ಮಧ್ಯೆ ಯಶ್​​ ಹಾಗೂ ರಾಕ್​ಲೈನ್​ ವೆಂಕಟೇಶ್​ ಸುಮಲತಾ ಅಂಬರೀಶ್​ ಅವರನ್ನ ಒಳಗೆ ಕರೆದುಕೊಂಡು ಬರುತ್ತಿದ್ದರು. ಈ ವೇಳೆ  ಒಂದೆರಡು ಭಾರವಾದ ಹೆಜ್ಜೆಗಳನ್ನಿಟ್ಟ ಸುಮಲತಾ ಅಂಬರೀಶ್​ ಅಲ್ಲೆ ಕುಸಿದರು. ತಕ್ಷಣವೇ ಸ್ಥಳದಲ್ಲಿದ್ದವರು ಸುಮಲತಾ ಅವರನ್ನ ಆರೈಕೆ ಮಾಡಿದರು ಸ್ಥಳದಲ್ಲಿ ರಾಕ್‌ಲೈನ್ ವೆಂಕಟೇಶ್ ಹಾಗೂ ಮಗ ಅಭಿಷೇಕ್ ಸುಮಲತಾರನ್ನು ಸಂತೈಸುವ ಪ್ರಯತ್ನ ಮಾಡುತ್ತಿದ್ದಾರೆ. ಲ್ಪ ಸುಧಾರಿಸಿಕೊಂಡ ಸುಮಲತಾ ಅವರನ್ನು ಮೋಹನ್ ಬಾಬು ಹಾಗೂ ಪುತ್ರಿ ಲಕ್ಷ್ಮೀ ಮಂಚು ಕೈಹಿಡಿದುಕೊಂಡು ಬಂದು ಕಾದಿರಿಸಲಾದ ಆಸನದಲ್ಲಿ ಕೂರಿಸಿದರು.