ಚೆನ್ನೈ,: ಯಾವುದೇ ಸೂಕ್ತ ಪ್ರಯಾಣ ದಾಖಲೆಗಳಿಲ್ಲದೆ ಗುರುವಾರ ಬೆಳಗ್ಗೆ ಬೋಟ್‌ನ ಮೂಲಕ ಚೆನ್ನೈನ ಬಂದರ್‌ಗೆ ಪ್ರವೇಶಿಸಿದ್ದ ಮಾಲ್ಡೀವ್ಸ್‌ನ ಮಾಜಿ ಉಪಾಧ್ಯಕ್ಷ ಅಹ್ಮದ್ ಅದೀಬ್ ಅಬ್ದುಲ್ ಗಫೂರ್‌ರನ್ನು ಶನಿವಾರ ಬೆಳಗ್ಗೆ ಅವರ ದೇಶಕ್ಕೆ ಗಡಿಪಾರು ಮಾಡಲಾಗಿದೆ.
ತನಗೆ ರಾಜಕೀಯ ಆಶ್ರಯ ನೀಡಿ ಎಂಬ ಗಫೂರ್ ಮನವಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದ ಬಳಿಕ ತಮಿಳುನಾಡು ಸರಕಾರ ಅವರನ್ನು ಗಡಿಪಾರು ಮಾಡಿರುವುದಾಗಿ ಹೇಳಿದೆ.
ಯಾವುದೇ ಅಧಿಕೃತ ದಾಖಲೆ ಇಲ್ಲದೇ ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಸಿಂಗಾಪುರ ನೋಂದಣಿಯ ನೌಕೆಯಲ್ಲಿ ಆಗಮಿಸಿದ್ದ ವೇಳೆ ಟ್ಯುಟಿಕಾರಿನ್ ಪೊಲೀಸರು ಬಂಧಿಸಿ, ಸರಕು ಸಾಗಣೆಯ ನೌಕೆಯಲ್ಲಿಯೇ ಇರಿಸಿದ್ದರು. ಹಣ ದುರುಪಯೋಗದ ಆರೋಪ ಎದುರಿಸುತ್ತಿದ್ದ ಅಹ್ಮದ್ ದೇಶ ಬಿಟ್ಟು ತೆರಳದಂತೆ ಮಾಲ್ಡೀವ್ಸ್ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ವಿರ್ಗೊ-9 ಬೋಟ್‌ನಲ್ಲಿ ಆಗಮಿಸಿದ್ದ ಅಹ್ಮದ್ ಅದೀಬ್ ಹಾಗೂ ಬೋಟ್‌ನಲ್ಲಿದ್ದ ಇತರ 9 ಸಿಬ್ಬಂದಿಯನ್ನು ಅಂತರ್‌ರಾಷ್ಟ್ರೀಯ ಕಡಲ ಗಡಿರೇಖೆಯಲ್ಲಿ ಮಾಲ್ಡೀವ್ಸ್‌ನ ಭದ್ರತಾ ಸಿಬ್ಬಂದಿಗೆ ಭಾರತೀಯ ತಟ ರಕ್ಷಕ ಪಡೆಯ ಸಿಬ್ಬಂದಿ ಹಸ್ತಾಂತರಿಸಿದೆ,
ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಅದೀಬ್ ಹೇಗೆ ಪಲಾಯನ ಮಾಡಿದರು, ಅವರಿಗೆ ಯಾರ್ಯಾರು ನೆರವಾದರು ಎಂಬ ಬಗ್ಗೆ ಮಾಲ್ದೀವ್ಸ್ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.
ಜುಲೈ 11ರಂದು ವಿರ್ಗೋ ಎಂಬ ದೋಣಿ ಮಾಲ್ಡೀವ್ಸ್ ಗೆ ಸರಕುಗಳನ್ನು ತೆಗೆದುಕೊಂಡು ಹೋಗಿತ್ತು. ನಂತರ ಅಲ್ಲಿಂದ ಜುಲೈ 28ರಂದು ಮರಳುವಾಗ ಅಹ್ಮದ್ ಅದೀಬ್ ತನಗೆ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಹೇಳಿ ಹಡಗಿನಲ್ಲಿ ಪ್ರಯಾಣ ಬೆಳೆಸಿದ್ದ. ಈ ಹಡಗಿನಲ್ಲಿ ಎಂಟು ಮಂದಿ ಇಂಡೋನೇಷಿಯನ್ನರು ಮತ್ತು ಒಬ್ಬರು ಭಾರತೀಯ ಸೇರಿ ಒಂಬತ್ತು ಹಡಗಿನ ಸಿಬ್ಬಂದಿ ಇದ್ದರು.
ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…
ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…
ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರಾಯ್ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…
ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್ ಲಕ್ನೋ: ರಾಮಭಕ್ತರ…
ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…