Featured

ಅಕ್ರಮ ಜಾಗದಲ್ಲಿ ನಿರ್ಮಿಸಿದ ದಲಿತ ವೃದ್ಧೆಯ ಮನೆ ಕೆಡವಿ ಹಾಕಿದ ಕಂದಾಯ ಇಲಾಖೆ-ಶಿರ್ವ ಗ್ರಾಮ ಪಂಚಾಯತ್ ಮುಂಭಾಗ ಕಾಂಗ್ರೇಸ್ ಪ್ರತಿಭಟನೆ-ಪಿಡಿಓ ಹಾಗೂ ಸೊರಕೆ ನಡುವೆ ನೂಕಾಟ-ತಲ್ಲಾಟ-ತಲ್ಲಾಟದ ರಭಸಕ್ಕೆ ಹರಿದ ಸೊರಕೆಯ ಶರ್ಟ್:vishwanews24

ಅಕ್ರಮ ಜಾಗದಲ್ಲಿ ನಿರ್ಮಿಸಿದ ದಲಿತ ವೃದ್ಧೆಯ ಮನೆ ಕೆಡವಿ ಹಾಕಿದ ಕಂದಾಯ ಇಲಾಖೆ

ಶಿರ್ವ ಗ್ರಾಮ ಪಂಚಾಯತ್ ಮುಂಭಾಗ ಕಾಂಗ್ರೇಸ್ ಪ್ರತಿಭಟನೆ

ಪಿಡಿಓ ಹಾಗೂ ಸೊರಕೆ ನಡುವೆ ನೂಕಾಟ-ತಲ್ಲಾಟ

ತಲ್ಲಾಟದ ರಭಸಕ್ಕೆ ಹರಿದ ಸೊರಕೆಯ ಶರ್ಟ್

ಕಾಪು: ಕಾಪು ತಾಲೂಕು ಶಿರ್ವ ಗ್ರಾಮದ ಸರ್ವೆ ಸಂಖ್ಯೆ ೪೪೧/೧ಬಿಪಿ೧ ರಲ್ಲಿ ಸರ್ಕಾರಿ ಜಮೀನಿನಲ್ಲಿ ದಲಿತ ಜನಾಂಗಕ್ಕೆ ಸೇರಿದ ಶ್ರೀಮತಿ ಪದ್ಮಬಾಯಿ ಎಂಬವರು ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ತಗಡಿನ ಗುಡಿಸಲು ಮನೆ ನಿರ್ಮಾಣ ಮಾಡಿಕೊಂಡಿದ್ದು ಈ ಪೈಕಿ ಕಂದಾಯ ಇಲಾಖೆ ದಿನಾಂಕ ೦೪/೦೪/೨೦೨೦ ನೇ ಸೋಮವಾರ ಜೆಸಿಬಿ ಮುಖಾಂತರ ಮನೆಯೊಳಗಿದ್ದ ದಿನಸಿ ಬಟ್ಟೆ ಸಾಮಾಗ್ರಿಗಳ ಸಹಿತವಾಗಿ ಅಕ್ರಮ ಮನೆಯನ್ನು ಕೆಡವಿ ಹಾಕಿದ್ದರಿ . ಈ ವಿಚಾರವನ್ನು ಖಂಡಿಸಿ ಇಂದು ಶಿರ್ವ ಗ್ರಾಮ ಪಂಚಾಯತ್ ಮುಂಭಾಗ ಮಾಜಿ ಸಚಿವ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆಯ ಮುಂದಾಲತ್ವದಲ್ಲಿ ಬಡ ಕುಟುಂಬಕ್ಕೆ ನ್ಯಾಯ ದೊರಕಬೇಕೆಂಬ ದೃಷ್ಟಿಯಿಂದ ಪ್ರತಿಭಟನೆ ನಡೆಸಿ ಪಿಡಿಓ ಮುಖಾಂತರ ಮನವಿ ಸಲ್ಲಿಸುವ ಸಮಯದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸೊರಕೆಯ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂಧರ್ಬದಲ್ಲಿ ಗುಂಪಾಗಿ ಸೇರಿದ್ದ ಪ್ರತಿಭಟನಕಾರರ ನೂಕಾಟ ತಲ್ಲಾಟದಲ್ಲಿ ಮಾಜಿ ಸಚಿವ ಸೊರಕೆಯ ಶರ್ಟ್ ಹರಿದ ಘಟನೆ ನಡೆದಿದೆ.

ಬಿಜೆಪಿ ಕಾರ್ಯಕರ್ತರ  ಜೈ ಶ್ರೀರಾಮ್ ಘೋಷಣೆ

ಈ ಸುದ್ದಿ ಹರಿದಾಡುತ್ತಿದ್ದಂತೆ ಸ್ಥಳಕ್ಕೆ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು ಸೊರಕೆಯ ವಿರುದ್ದ ಹಾಗೂ ಕಾಂಗ್ರೇಸ್ ಪಕ್ಷದ ವಿರುದ್ಧ ಘೋಷಣೆ ಕೂಗಿದ್ದು ಮಾತ್ರವಲ್ಲದೆ ವಂದೇ ಮಾತರಂ ಹಾಗೂ ಜೈ ಶ್ರೀರಾಮ್ ಘೋಷಣೆ ಕೂಗಿದರು.

ನೋಟಿಸ್ ನೀಡಿದ ಎರಡೇ ದಿನ ಆಗಿತ್ತು.

ಈ ಪೈಕಿ ಅಕ್ರಮ ಜಾಗದಲ್ಲಿ ನಿರ್ಮಾಣವಾಗಿದ್ದ ಮನೆಯನ್ನು ತೆರವು ಮಾಡುವಂತೆ ದಲಿತ ಕುಟುಂಬಕ್ಕೆ ಎರಡು ದಿನ ಹಿಂದೆ ನೋಟಿಸ್ ನೀಡಲಾಗಿತ್ತು ಆದರೇ ಆ ಕುಟುಂಬ ೯೪ಸಿಸಿ ಅಡಿಯಲ್ಲಿ ಅರ್ಜಿ ನೀಡಿರುವುದರಿಂದ ಸುಮ್ಮನಾಗಿದ್ದರು.

                       ದಲಿತ ವೃದ್ಧೆ

ಪಿಡಿಓ ಸರ್ವಾಧಿಕಾರಿ ಧೋರಣೆಗೆ ಕೆಂಡಾಮಂಡಳವಾದ ಸೊರಕೆ

ಮನವಿ ಸಲ್ಲಿಸಲು ಪಂಚಾಯತ್ ಆಗಮಿಸಿದ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಸೊರಕೆ ಪಿಡಿಓ ಜತೆ ಒಂದಿಷ್ಟು ಪ್ರಶ್ನೆಗಳನ್ನುಮಾಡಿದ ಸಮಯದಲ್ಲಿ ಉಡಾಫೆ ಉತ್ತರ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ತೋರ್ಪಡಿಸಿದ್ದರಿಂದ ಮಾಜಿ ಸಚಿವರು ಪಂಚಾಯತ್ ಅಭಿವೃದ್ದಿ ಅಧಿಕಾರಿಯ ವಿರುದ್ದ ಕೆಂಡಾಮಂಡಳವಾದರು.

                                      PDO

ಸ್ಥಳಕ್ಕೆ ಭೇಟಿ ನೀಡಿದ ತಹಾಶಿಲ್ದರ್ ಕುಲಕರ್ಣಿ

ಘಟನಾ ಸ್ಥಳಕ್ಕೆ ಕಾಪು ತಾಲೂಕಿನ ತಹಾಶಿಲ್ದಾರ್ ಶ್ರೀನಿವಾಸ ಕುಲಕರ್ಣಿ ಭೇಟಿ ನೀಡಿ ವಿನಯ್ ಕುಮಾರ್ ಸೊರಕೆಯ ಮನವೊಲಿಸಲು ಪ್ರಯತ್ನಿಸಿ ಮನೆ ಕಳೆದುಕೊಂಡ ದಲಿತ ಕುಟುಂಬಕ್ಕೆ ಶೀಘ್ರವಾಗಿ ನ್ಯಾಯ ಒದಗಿಸುವ ಬಗ್ಗೆ ಮಾಹಿತಿ ನೀಡಿದರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago