ಅಗ್ನಿಪಥ್ ಯೋಜನೆಗೆ ವಿರೋಧ ಮಾಡಬಾರದು, ಇದೊಂದು ಆದರ್ಶಪ್ರಾಯ ಯೋಜನೆ : ಎಸ್.ಎಂ. ಕೃಷ್ಣ – Vishwanews24

Featured, ರಾಜ್ಯ ನ್ಯೂಸ್

ಅಗ್ನಿಪಥ್ ಯೋಜನೆಗೆ ವಿರೋಧ ಮಾಡಬಾರದು, ಇದೊಂದು ಆದರ್ಶಪ್ರಾಯ ಯೋಜನೆ : ಎಸ್.ಎಂ. ಕೃಷ್ಣ – Vishwanews24

ಮೈಸೂರು: ಅಗ್ನಿಪಥ್ ಯೋಜನೆಗೆ ವಿರೋಧ ಮಾಡಬಾರದು. ಇದೊಂದು ಆದರ್ಶಪ್ರಾಯ ಯೋಜನೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ.

ಸ್ವಗ್ರಾಮ ಮದ್ದೂರಿನ ಸೋಮನಹಳ್ಳಿಯಲ್ಲಿ ಸಹೋದರ ದಿವಂಗತ ಎಸ್.ಎಂ. ಶಂಕರ್ ಮೆಮೋರಿಯಲ್ ಟ್ರಸ್ಟ್ ಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಾವಧಿಗೆ ಸೇನೆಗೆ ಯುವಕರನ್ನು ನೇಮಿಸಿಕೊಳ್ಳುವುದು ಸ್ವಾಗತಾರ್ಹ ಕ್ರಮ. ಅಮೆರಿಕಾ, ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ 20 ವರ್ಷ ಮೇಲ್ಪಟ್ಟ ಯುವಕರು ಕಡ್ಡಾಯವಾಗಿ ಎರಡು ವರ್ಷ ಸೈನಿಕ ಶಿಕ್ಷಣ ಪಡೆಯಬೇಕು. ಭಾರತದಲ್ಲಿ ಈ ಯೋಜನೆ ಜಾರಿಯಾಗಿರುವುದು ಅತ್ಯುತ್ತಮವಾಗಿದೆ ಎಂದರು.

ನಾಲ್ಕು ವರ್ಷದ ಸೇವೆ ಬಳಿಕ ಅಗ್ನಿವೀರರಿಗೆ ಮಿಲಿಟರಿಯ ಬೇರೆ ವಿಭಾಗಗಳು, ಸರ್ಕಾರದ ಇತರ ಹುದ್ದೆಗಳು, ಖಾಸಗಿ ಕಂಪೆನಿಗಳಲ್ಲಿಯೂ ಕೆಲಸ ಮಾಡುವುದಕ್ಕೆ ಅವಕಾಶವಿದೆ. ರಾಜಕೀಯ ದೃಷ್ಟಿಯಿಂದ ಈ ಯೋಜನೆಯನ್ನು ನೋಡದೆ ದೇಶದ ಹಿತದ ದೃಷ್ಟಿಯಿಂದ ನೋಡಬೇಕು. ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಈ ಯೋಜನೆಯಿಂದಾಗಿ ಹೆಚ್ಚು ಲಾಭವಾಗಿರುವುದರಿಂದ ಭಾರತದ ಹೆಜ್ಜೆಯೂ ದೇಶಕ್ಕೆ ಒಳ್ಳೆಯದಾಗಲಿದೆ ಎಂದವರು ತಿಳಿಸಿದರು.

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಇಬ್ಬರು ಶಾಸಕರನ್ನು ಸದಸ್ಯತ್ವದಿಂದ ಉಚ್ಚಾಟಿಸಿ ದ ಜೆಡಿಎಸ್‌ – Vishwanews24

Leave a Reply