ಅಗ್ನಿಪಥ್ ಯೋಜನೆ : ಕೇಂದ್ರದ ಯೋಜನೆಗಳನ್ನು ದೇಶದ ಜನ ಸ್ವೀಕಾರ ಮಾಡುತ್ತಿಲ್ಲ : ರಾಹುಲ್ ಗಾಂಧಿ – Vishwanews24

Featured, ರಾಷ್ಟ್ರ ನ್ಯೂಸ್

ಅಗ್ನಿಪಥ್ ಯೋಜನೆ ಯುವಕರಿಂದ ತಿರಸ್ಕರಿಸಲಾಗಿದೆ..

ಕೃಷಿ ಕಾನೂನು – ರೈತರಿಂದ ತಿರಸ್ಕರಿಸಲಾಗಿದೆ..

ನೋಟು ಅಮಾನ್ಯೀಕರಣವನ್ನು ಅರ್ಥಶಾಸ್ತ್ರಜ್ಞರು ನಿರಾಕರಿಸಿದ್ದಾರೆ..

ಜಿಎಸ್‍ಟಿ – ವ್ಯಾಪಾರಿಗಳಿಂದ ತಿರಸ್ಕರಿಸಲಾಗಿದೆ..

ದೇಶದ ಜನತೆಗೆ ಏನು ಬೇಕು ಎಂಬುದು ಪ್ರಧಾನಿಗೆ ಅರ್ಥವಾಗುತ್ತಿಲ್ಲ..

ನವದೆಹಲಿ: ಅಗ್ನಿಪಥ್ ಯೋಜನೆಯನ್ನು ಯುವಕರು ತಿರಸ್ಕರಿಸುತ್ತಿರುವ ಕುರಿತಾಗಿ ಟ್ವಿಟ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಾಲೆಳೆದರು.

ಟ್ವೀಟ್‍ನಲ್ಲಿ ಏನಿದೆ?: ಕೇಂದ್ರದ ಯೋಜನೆಗಳನ್ನು ದೇಶದ ಜನ ಸ್ವೀಕಾರ ಮಾಡುತ್ತಿಲ್ಲ. ಅಗ್ನಿಪಥ್ ಯೋಜನೆ ಯುವಕರಿಂದ ತಿರಸ್ಕರಿಸಲಾಗಿದೆ. ಕೃಷಿ ಕಾನೂನು – ರೈತರಿಂದ ತಿರಸ್ಕರಿಸಲಾಗಿದೆ. ನೋಟು ಅಮಾನ್ಯೀಕರಣವನ್ನು ಅರ್ಥಶಾಸ್ತ್ರಜ್ಞರು ನಿರಾಕರಿಸಿದ್ದಾರೆ. ಜಿಎಸ್‍ಟಿ – ವ್ಯಾಪಾರಿಗಳಿಂದ ತಿರಸ್ಕರಿಸಲಾಗಿದೆ. ದೇಶದ ಜನತೆಗೆ ಏನು ಬೇಕು ಎಂಬುದು ಪ್ರಧಾನಿಗೆ ಅರ್ಥವಾಗುತ್ತಿಲ್ಲ. ಏಕೆಂದರೆ ಅವರ ಸ್ನೇಹಿತರ ದನಿ ಬಿಟ್ಟು ಬೇರೇನೂ ಕೇಳುವುದಿಲ್ಲ ಎಂದು ವ್ಯಂಗ್ಯವಾಡಿದರು.

ಗುರುವಾರ ಅಗ್ನಿಪಥ್ ವಿರೋಧಿಸಿ ಬಿಹಾರ, ಉತ್ತರಪ್ರದೇಶ ರಾಜ್ಯಗಳಲ್ಲಿ ಪ್ರತಿಭಟನೆಯ ಕಿಚ್ಚು ಹೆಚ್ಚಿದೆ. ಹಾಗಾಗಿ ಪೂರ್ವ ಮಧ್ಯ ರೈಲ್ವೆಯ 22 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು.

ರಾಯಚೂರು : ಬ್ರ್ಯಾಂಡೆಡ್ ಕಂಪನಿ ಲೆಬಲ್ ಹಾಕಿ ನಕಲಿ ವಸ್ತುಗಳ  ಮಾರಾಟ : ಇಬ್ಬರ ಬಂಧನ – Vishwanews24

Leave a Reply