ಅಗ್ನಿಪಥ ಯೋಜನೆಯಲ್ಲಿ ತರಬೇತಿ ಪಡೆದವರಿಗೆ – ಹಿ.ವರ್ಗದ ವಸತಿ ಶಾಲೆಯ ದೈಹಿಕ ಶಿಕ್ಷಕರ ನೇಮಕಾತಿಯಲ್ಲಿ ಶೇಕಡಾ75 ಮೀಸಲಾತಿ : ಸಚಿವ ಕೋಟ ಶ್ರೀನಿವಾಸ ಪೂಜಾರಿ: Vishwanews24
ಅಗ್ನಿಪಥ ಯೋಜನೆಯಲ್ಲಿ ತರಬೇತಿ ಪಡೆದವರಿಗೆ – ಹಿ.ವರ್ಗದ ವಸತಿ ಶಾಲೆಯ ದೈಹಿಕ ಶಿಕ್ಷಕರ ನೇಮಕಾತಿಯಲ್ಲಿ ಶೇಕಡಾ75 ಮೀಸಲಾತಿ : ಸಚಿವ ಕೋಟ ಶ್ರೀನಿವಾಸ ಪೂಜಾರಿ: Vishwanews24
ಉಡುಪಿ: ಅಗ್ನಿಪಥ ಯೋಜನೆಯಲ್ಲಿ ತರಬೇತಿ ಪಡೆದವರಿಗೆ – ಹಿಂದುಳಿದ ವರ್ಗದ ವಸತಿ ಶಾಲೆಯಲ್ಲಿ ದೈಹಿಕ ಶಿಕ್ಷಕರ ನೇಮಕಾತಿಯಲ್ಲಿ ಶೇಕಡಾ75 ಮೀಸಲಾತಿ ನೀಡುವ ಬಗ್ಗೆ ಯೋಚನೆ ಮಾಡಿದ್ದು ಮುಂದಿನ ದಿನದಲ್ಲಿ ಯೋಜನೆಯಾಗಿ ಮಾರ್ಪಾಡಿಸುವ ಬಗ್ಗೆ ಅಧಿಕಾರಿಗಳಿಗೆ ಟಿಪ್ಪಣಿ ಸಮೇತ ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಗ್ನಿಪಥ ಯೋಜನೆ ದೇಶಕ್ಕೆ ಹಿತವಾಗುವ ಮತ್ತು ದೇಶಪ್ರೇಮಿಗಳನ್ನು ಉತ್ತೆಜಿಸುವುದಾಗಿದೆ ಆದುದರಿಂದ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಅಗ್ನಿ ಹಾಕುವ ಮುನ್ನ ಅಲೋಚಿಸಬೇಕಾಗಿದೆ ಎಂದರು.