ತಾತ ದೇವೇಗೌಡರಿಗಾಗಿ ಸಂಸದ ಸ್ಥಾನ ಬಿಟ್ಟು ಕೊಡಲು ಸಿರ್ಧರಿಸಿದ್ದೇನೆ : ಪ್ರಜ್ವಲ್ ರೇವಣ್ಣ -Vishwanews24

Featured, ರಾಜ್ಯ ನ್ಯೂಸ್

ಹಾಸನ: ಹಾಸನ ಲೋಕಸಭೆ ಕ್ಷೇತ್ರದಿಂದ ಗೆದ್ದು ಬಂದಿರುವ ಏಕೈಕ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ತಮ್ಮ ತಾತ ಎಚ್.ಡಿ ದೇವೇಗೌಡ ಅವರ ಸೋಲಿನ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ತಾತ ದೇವೇಗೌಡರು ಮತ್ತೆ ಹಾಸನದಿಂದಲೇ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಲಿ ಎಂಬ ಲೆಕ್ಕಾಚಾರದೊಂದಿಗೆ ತಮ್ಮ ಗೆಲುವನ್ನು ತ್ಯಾಗ ಮಾಡಿ ರಾಜೀನಾಮೆ ನೀಡುವುದಾಗಿ ಪ್ರಜ್ವಲ್ ಘೋಷಿಸಿದ್ದಾರೆ.

ತಾತನ ಸೋಲಿನಿಂದ ಮನಸ್ಸಿಗೆ ನೋವಾಗಿದ್ದು ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಪ್ರಜ್ವಲ್ ರೇವಣ್ಣ ಘೋಷಿಸಿದ್ದಾರೆ. ಬಳಿಕ ತಾತನನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುವುದಾಗಿಯೂ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾದಾಗ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಗೌಡರ ಕುಟುಂಬದ ಮೂವರ ಪೈಕಿ ಪ್ರಜ್ವಲ್ ಮಾತ್ರ ಗೆದ್ದಿದ್ದರು. ಗೆದ್ದ ಮರುದಿನವೇ ಕ್ಷೇತ್ರದ ತ್ಯಾಗಕ್ಕೆ ಪ್ರಜ್ವಲ್ ಮುಂದಾಗಿರುವುದು ಭಾವನಾತ್ಮಕ ಒತ್ತಡದಿಂದ ಕೈಗೊಂಡ ನಡೆಯೇ ಅಥವಾ ನಿಜಕ್ಕೂ ದೇವೇಗೌಡರು ಮತ್ತೆ ಹಾಸನದಿಂದ ಸ್ಪರ್ಧಿಸಿ ಗೆದ್ದು ಸಂಸತ್ ಪ್ರವೇಶಿಸಲು ಬಯಸಿದ್ದಾರೆಯೇ ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ.