ಅಟಲ್ ಬಿಹಾರಿ ವಾಜಪೇಯಿ ಅವರ ಎರಡನೇ ಪುಣ್ಯ ತಿಥಿ : ‘ಈ ದೇಶ ಯಾವತ್ತಿಗೂ ‘ನಿಮ್ಮ ತ್ಯಾಗವನ್ನು ಮರೆಯುವುದಿಲ್ಲ : ಪ್ರಧಾನಿ ಟ್ವೀಟ್ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಎರಡನೇ ಪುಣ್ಯ ತಿಥಿ ವಾರ್ಷಿಕೋತ್ಸವದ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಾಜಪೇಯಿ ಅವರ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ವಾಜಪೇಯಿಯವರೊಂದಿಗಿನ ಒಡನಾಟದ ವಿಡಿಯೊವನ್ನು ಮೋದಿ ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಧಾನಿ ಮೋದಿಯವರ ಧ್ವನಿಯಿದೆ. ”ಈ ದೇಶ ಯಾವತ್ತಿಗೂ ಅಟಲ್ ಜೀಯವರ ತ್ಯಾಗವನ್ನು ಮರೆಯುವುದಿಲ್ಲ, ಅವರ ನಾಯಕತ್ವದಲ್ಲಿ ಪರಮಾಣು ಶಕ್ತಿಯಲ್ಲಿ ಭಾರತ ಮತ್ತೊಂದು ಹಂತಕ್ಕೆ ಹೋಗಿ ಮೈಲುಗಲ್ಲು ಸ್ಥಾಪಿಸಿತು. ರಾಜಕಾರಣಿಯಾಗಿ, ಸಂಸದರಾಗಿ, ಸಚಿವರಾಗಿ ಅಥವಾ ಪ್ರಧಾನ ಮಂತ್ರಿಯಾಗಿ ಅಟಲ್ ಅವರು ಹಲವು ಪಾತ್ರಗಳನ್ನು ನಿರ್ವಹಿಸಿದ್ದರು. ಅವರ ಜೀವನದ ಬಗ್ಗೆ ಹಲವು ವಿಷಯಗಳನ್ನು ಮಾತನಾಡಬಹುದು. ಅವರ ಭಾಷಣದ ಬಗ್ಗೆ ದೇಶದ ಜನ ಮಾತನಾಡುತ್ತಾರೆ. ಭವಿಷ್ಯದಲ್ಲಿ ಕೆಲವು ತಜ್ಞರು ಅವರ ಭಾಷಣಗಳನ್ನು ವಿಶ್ಲೇಷಿಸುವುದಾದರೆ ಹಲವು ಸಂದರ್ಭಗಳಲ್ಲಿ ಅವರ ಮೌನ ಮಾತಿಗಿಂತ ಹೆಚ್ಚು ಶಕ್ತಿಶಾಲಿಯಾಗಿತ್ತು, ಜನರು ಅವರ ಮೌನದಿಂದ ಸಂದೇಶಗಳನ್ನು ಪಡೆಯುತ್ತಿದ್ದರು. ಸಂಸತ್ತಿನಲ್ಲಿ ಕೆಲವೊಂದು ಸಂದರ್ಭಗಳಲ್ಲಿ ಅವರು ಅಲ್ಪ ಮಾತುಗಳಿಗೆ ಶರಣಾಗುತ್ತಿದ್ದರು. ಇದು ಅವರ ಸೂಕ್ಷ್ಮಮತಿ ಎಂದು ಪ್ರಧಾನಿ ಹೇಳಿದ್ದಾರೆ.