ಅಡಿಲೇಡ್ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 31 ರನ್ ಗಳ ರೋಚಕ ಜಯ..
ಅಡಿಲೇಡ್ : ಆಸ್ಟ್ರೇಲಿಯಾ ನೆಲದಲ್ಲಿ ಭಾರತವು ಮೊದಲ ಪಂದ್ಯ ಗೆದ್ದಿದ್ದು, ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿದೆ.
ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 31 ರನ್‌ಗಳ ಅಂತರದ ಸ್ಮರಣೀಯ ಗೆಲುವು ದಾಖಲಿಸಿದೆ. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಕೊನೆಯ ದಿನವಾದ ಇಂದು ಟೆಸ್ಟ್ ಪಂದ್ಯವು ಅತ್ಯಂತ ರೋಚಕ ಘಟ್ಟಕ್ಕೆ ಹೋಗಿತ್ತು. ಆರಂಭದಲ್ಲಿ ಭಾರತದ ಮಡಿಲಲ್ಲಿ ಇದ್ದ ವಿಜಯಲಕ್ಷ್ಮಿ ಆಸ್ಟ್ರೇಲಿಯನ್ನರ ಕಡೆ ವಾಲುವುದರಲ್ಲಿತ್ತು ಆದರೆ ಕೊನೆಯ ಕ್ಷಣದಲ್ಲಿ ಭಾರತವು ಉತ್ತಮ ಬೌಲಿಂಗ್ ದಾಳಿ ಪ್ರದರ್ಶಿಸಿ ಗೆಲುವು ತಮ್ಮದಾಗಿಸಿಕೊಂಡರು.
ಆಸಿಸ್ ನೆಲದಲ್ಲಿ ಸರಣಿಯ ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿರುವುದು ಭಾರತಕ್ಕೆ ಐತಿಹಾಸಿಕ ಸಾಧನೆಯಾಗಿದ್ದು, ಈ ವರೆಗೂ ಆಸಿಸ್ ನೆಲದಲ್ಲಿ ಭಾರತ ಈ ಸಾಧನೆ ಮಾಡಿರಲಿಲ್ಲ. ಕ್ರಿಕೆಟ್ ಇತಿಹಾಸದಲ್ಲೇ ಆಸಿಸ್ ನೆಲದಲ್ಲಿ ಸರಣಿಯ ಮೊದಲ ಪಂದ್ಯದಲ್ಲೇ ಭಾರತ ಜಯ ಸಾಧಿಸಿರುವುದು ಇದೇ ಮೊದಲು.
