Featured

ಅದಾನಿ ಸಮೂಹ ಷೇರು ಮೌಲ್ಯಗಳಲ್ಲಿ ಭಾರೀ ಕುಸಿತ ; ಎಲ್​​ಐಸಿಗೆ ಎರಡೇ ದಿನದಲ್ಲಿ 18,000 ಕೋಟಿ ನಷ್ಟ – Vishwanews24

ಅದಾನಿ ಸಮೂಹ ಷೇರು ಮೌಲ್ಯಗಳಲ್ಲಿ ಭಾರೀ ಕುಸಿತ ; ಎಲ್​​ಐಸಿಗೆ ಎರಡೇ ದಿನದಲ್ಲಿ 18,000 ಕೋಟಿ ನಷ್ಟ

ಮುಂಬೈ: ಅಮೆರಿಕದ ಸಂಶೋಧನಾ ಸಂಸ್ಥೆಯ ವರದಿ ಪರಿಣಾಮವಾಗಿ ಅದಾನಿ ಸಮೂಹದ ಷೇರು ಮೌಲ್ಯಗಳಲ್ಲಿ ಭಾರೀ ಕುಸಿತವಾಗಿರುವುದು ಭಾರತೀಯ ಜೀವ ವಿಮಾ ನಿಗಮ ಎಲ್​​ಐಸಿಗೂ ದೊಡ್ಡ ಹೊಡೆತ ನೀಡಿದೆ. ಅದಾನಿ ಸಮೂಹ ಸಂಸ್ಥೆಗಳಲ್ಲಿ ಎಲ್​ಐಸಿ ಕೂಡ ಹಣ ಹೂಡಿರುವುದರಿಂದ ಆ ಕಂಪನಿಯ ಷೇರು ಮೌಲ್ಯದಲ್ಲಿ ಕುಸಿತವಾಗಿರುವುದರ ಹೊಡೆತ ಎಲ್​ಐಸಿ ಮೇಲೂ ಬಿದ್ದಿದೆ. ಪರಿಣಾಮವಾಗಿ ಎರಡೇ ದಿನಗಳಲ್ಲಿ ಎಲ್​​ಐಸಿ 18,647 ಕೋಟಿ ರೂ. ಕಳೆದುಕೊಂಡಿದೆ. ಅದಾನಿ ಸಮೂಹದ ಕಂಪನಿಗಳಲ್ಲಿ ಎಲ್​ಐಸಿ ಹೂಡಿಕೆಯ ಮೌಲ್ಯ ಜನವರಿ 24ರ ವೇಳೆಗೆ 81,268 ಕೋಟಿ ರೂ. ಆಗಿತ್ತು. ಇದು ಜನವರಿ 27ಕ್ಕೆ 62,621 ಕೋಟಿ ರೂ.ಗೆ ಕುಸಿದಿದೆ.

ಅದಾನಿ ಗ್ರೀನ್ ಎನರ್ಜಿ, ಅದಾನಿ ಎಂಟರ್​ಪ್ರೈಸಸ್, ಅದಾನಿ ಪೋರ್ಟ್ಸ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್​​ಮಿಷನ್​ಗಳ ಶೇ 1ರಷ್ಟು ಷೇರು ಅನ್ನು ಎಲ್​ಐಸಿ ಹೊಂದಿದೆ ಎಂಬುದು ದತ್ತಾಂಶಗಳಿಂದ ತಿಳಿದುಬಂದಿದೆ. ಇತ್ತೀಚೆಗೆ ಅಂಬುಜಾ ಸಿಮೆಂಟ್ಸ್​​ ಮತ್ತು ಎಸಿಸಿಯಲ್ಲೂ ಹೂಡಿಕೆ ಮಾಡಿದೆ ಎಂದು ವರದಿಯಾಗಿದೆ. ಈ ಕಂಪನಿಗಳ ಷೇರುಗಳು ಕಳೆದ ಎರಡು ಟ್ರೇಡಿಂಗ್ ಸೆಷನ್​​ಗಳಲ್ಲಿ ಶೇ 27 ಹಾಗೂ ಶೇ 19ರ ನಡುವೆ ಕುಸಿದಿವೆ.

ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್​ಬರ್ಗ್ ರಿಸರ್ಚ್​ ಲೆಕ್ಕಪತ್ರ ವಂಚನೆ ಮತ್ತು ಷೇರು ಬೆಲೆಯ ಮೇಲೆ ಪರಿಣಾಮ ಬೀರಿರುವ ಬಗ್ಗೆ ಅದಾನಿ ಸಮೂಹದ ಮೇಲೆ ಆರೋಪ ಮಾಡಿದ ಬೆನ್ನಲ್ಲೇ ಸಮೂಹದ ಷೇರುಗಳ ಮೌಲ್ಯದಲ್ಲಿ ಕುಸಿತ ಆರಂಭವಾಗಿತ್ತು.

ಮಿತಿಯಲ್ಲೇ ಸಾಲ ನೀಡಿದ್ದೇವೆ ಎಂದ ಎಸ್​ಬಿಐ
ಅದಾನಿ ಸಮೂಹ ಸಂಸ್ಥೆಗಳಿಗೆ ಸಾಲ ನೀಡಿರುವ ಎಸ್​​ಬಿಐ ಕೂಡ ಇತ್ತೀಚಿನ ಬೆಳವಣಿಗೆಯಿಂದಾಗಿ ನಷ್ಟದ ಭೀತಿಯಲ್ಲಿದೆ. ಎಸ್​​ಬಿಐ ಷೇರು ಮೌಲ್ಯದಲ್ಲಿಯೂ ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಭಾರೀ ಕುಸಿತವಾಗಿದೆ. ಆದರೆ, ಆರ್​ಬಿಐ ಮಾನದಂಡದ ಪ್ರಕಾರ, ಇತಿಮಿತಿಯ ಒಳಗೇ ಅದಾನಿ ಸಮೂಹದ ಕಂಪನಿಗಳಿಗೆ ಸಾಲ ನೀಡಲಾಗಿದೆ ಎಂದು ಬ್ಯಾಂಕ್ ಹೇಳಿದೆ. ಯಾವುದೇ ಕಂಒನಿಗಳ ಸಮೂಹಕ್ಕೆ ಶೇ 25ಕ್ಕಿಂತ ಹೆಚ್ಚಿನ ಸಾಲ ನೀಡಲು ಆರ್​​ಬಿಐ ನಮಗೆ ಅನುಮತಿಸಿಲ್ಲ. ಆ ಮಿತಿಯ ಒಳಗೆಯೇ ನಾವು ಸಾಲ ನೀಡಿದ್ದೇವೆ ಎಂದು ಎಸ್​ಬಿಐ ಹೇಳಿದೆ.

ಎಸ್​​ಬಿಐ, ಎಲ್​ಐಸಿ ಷೇರು ಮೌಲ್ಯದಲ್ಲಿ ಕುಸಿತ
ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಕುಸಿತವಾದ ಬೆನ್ನಲ್ಲೇ ಅದರ ಜತೆ ಸಂಬಂಧ ಹೊಂದಿರುವ ಎಲ್​ಐಸಿ ಹಾಗೂ ಎಸ್​ಬಿಐ ಷೇರು ಮೌಲ್ಯದಲ್ಲಿಯೂ ಕುಸಿತವಾಗಿದೆ. ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ ಎಸ್​ಬಿಐ ಷೇರು ಮೌಲ್ಯದಲ್ಲಿ ಶೇ 28.75ರಷ್ಟು ಕುಸಿತ ದಾಖಲಾಗಿತ್ತು. ಮತ್ತೊಂದೆಡೆ, ಎಲ್​ಐಸಿ ಷೇರು ಮೌಲ್ಯದಲ್ಲಿ ಶೇ 23.45ರಷ್ಟು ಕುಸಿತವಾಗಿದೆ.

Vishwa News 24

Recent Posts

ಕಾರ್ಕಳ : ಯಕ್ಷರಂಗಾಯಣದ ಹೆಸರನ್ನು ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕಪಕ್ಷೀಯ ನಿರ್ಧಾರ : ಸುನಿಲ್‌ ಕುಮಾರ್‌ ಆಕ್ರೋಶ -vishwanews24

ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್‌ ಕುಮಾರ್‌ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…

2 hours ago

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ -vishwanews24

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…

3 hours ago

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ -vishwanews24

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…

3 hours ago

ಮೂಡುಬಿದಿರೆ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ;  ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು  -vishwanews24

ಮೂಡುಬಿದಿರೆ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ;  ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು  ಮೂಡುಬಿದಿರೆ : ಚಲಿಸುತ್ತಿದ್ದ ಕಾರಿನ ಫಾಗ್ ಲೈಟ್‌ನಿಂದ ಅಕಸ್ಮಾತ್ತಾಗಿ ಬೆಂಕಿ…

5 hours ago

ಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ ಕೊಡುತ್ತಾರೆ, ಕೊಡದೆ ಎಲ್ಲಿ ಹೋಗುತ್ತಾರೆ : ಪ್ರಿಯಾಂಕ ಖರ್ಗೆ -vishwanews24

ಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ ಕೊಡುತ್ತಾರೆ, ಕೊಡದೆ ಎಲ್ಲಿ ಹೋಗುತ್ತಾರೆ : ಪ್ರಿಯಾಂಕ ಖರ್ಗೆ ಬೆಂಗಳೂರು: ಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ…

6 hours ago

ಉಡುಪಿ : ಬಾಲಕಿ ನಾಪತ್ತೆ -vishwanews24

ಉಡುಪಿ : ಬಾಲಕಿ ನಾಪತ್ತೆ ಉಡುಪಿ : ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರೀತಿ (16) ಎಂಬ…

19 hours ago