ಅದ್ಧೂರಿಯಾಗಿ ಉಡುಪಿಯಲ್ಲಿ ಲೋಕಾರ್ಪಣೆಗೊಂಡ “ವಿವೇಜಾ” ಬ್ರಾಂಡ್ ಆರೋಗ್ಯ ಪೇಯ : vishwanews24
ಅದ್ಧೂರಿಯಾಗಿ ಉಡುಪಿಯಲ್ಲಿ ಲೋಕಾರ್ಪಣೆಗೊಂಡ “ವಿವೇಜಾ” ಬ್ರಾಂಡ್ ಆರೋಗ್ಯ ಪೇಯ : vishwanews24
ಉಡುಪಿ: ರಿಯಲ್ ಎಂಜಾಯ್ ಪ್ರೈವೇಟ್ ಲಿಮಿಟೆಡ್ ಮುಂಬಯಿ ಇದರ ವಿವೇಜಾ ಎಂಬ ಬ್ರಾಂಡಿನ ಆರೋಗ್ಯ ಪೇಯ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಉಡುಪಿ ಮಣಿಪಾಲ್ ಇನ್ ಖಾಸಗಿ ಹೋಟೆಲ್ ನಲ್ಲಿ ದಿನಾಂಕ 20 ಫೆಬ್ರವರಿ ಆದಿತ್ಯವಾರ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿತು.

ಕಾರ್ಯಕ್ರಮವನ್ನು ಸಂಸ್ಥೆಯ ಮುಖ್ಯಸ್ಥೆ ಕುಮಾರಿ ಬಿಶಾಕ ಕುಮಾರಿ ಉದ್ಘಾಟಿಸಿ ಮಾತನಾಡಿ ” ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅದರ ಜತೆಗೆ ಜನರಿಗೆ ಉಪಕಾರ ಆಗಬೇಕೆಂಬ ಕನಸು ಇದೀಗ ನನಸಾಗುವ ಸಮಯ ಬಂದಿದೆ ಎಂದು ನಂಬಿದ್ದೇನೆ ಇವತ್ತು ಬಿಡುಗಡೆಯಾದ ಆರೋಗ್ಯ ಪೇಯ ಅತ್ಯಂತ ಉತ್ತಮ ಪರಿಣಾಮಕಾರಿಯಾಗಿದೆ – ಮನುಷ್ಯನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ಪೇಯ ಪಾತ್ರ ವಹಿಸುತ್ತದೆ.
ಈ ಕಂಪನಿಯ ಜತೆಗೆ ಬರಬೇಕೆನ್ನುವವರು ಜತೆಜತೆಯಾಗಿ ಹೆಜ್ಜೆಯನ್ನಿಡುವ ಮುಖಾಂತರ ಹೊಸ ಮೈಲಿಗಲ್ಲನ್ನು ಮುಟ್ಟುವಲ್ಲಿ ಯಶಸ್ವಿಯಾಗಬಹುದು ಮಾತ್ರವಲ್ಲದೆ ಒಟ್ಟು 12 ರಾಜ್ಯದಲ್ಲಿ ಈ ಪ್ರಾಡಕ್ಟ್ ಮಾರ್ಕೆಟಿಂಗ್ ಮಾಡಲಿಕ್ಕಿದ್ದು ಅತ್ಯಂತ ಸಾವಯವ ಆರೋಗ್ಯ ಪೇಯಾವಾಗಿದ್ದು ಇದೊಂದು ಹ್ಯುಮಿನಿಟಿ ಪವರ್ ಜಾಸ್ತಿ ಮಾಡಲು ಸಹಕಾರಿಯಾಗುತ್ತೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಯುರ್ವೇದ ವೈದ್ಯೆ ಶ್ರೀಮತಿ ಸಬೀನ ಬಾನು ಉಪಸ್ಥಿತರಿದ್ದು ವಿವೇಜಾ ಆರೋಗ್ಯ ಪೇಯದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಪದ್ಮ ಬೆಲ್ಚಡ,ಶಮನ್ ಮಂಗಳೂರು, ಅಶೋಕ್ ಆಚಾರ್ಯ, ಗಿರೀಶ್ ಬೆಳ್ತಂಗಡಿ ಅರವಿಂದ್ ಮೊದಲಾದವರು ಉಪಸ್ಥಿತರಿದ್ದರು.



