ಅನರ್ಹ ಶಾಸಕರನ್ನು ಮತ್ತೆ ಸೇರಿಸಿಕೊಳ್ಳುವ ಪ್ರಶ್ನೇಯೇ ಇಲ್ಲ : ದಿನೇಶ್ ಗುಂಡೂರಾವ್ -Vishwanews24

Featured, ಉಡುಪಿ

ಉಡುಪಿ: ಅನರ್ಹಗೊಂಡಿರುವ  15 ಶಾಸಕರಿಗೆ  ಕಾಂಗ್ರೆಸ್ ಪಕ್ಷದ  ಬಾಗಿಲು ಮುಚ್ಚಿದ್ದು,  ಅವರನ್ನು ಪಕ್ಷಕ್ಕೆ  ಮತ್ತೆ ಸೇರಿಸಿಕೊಳ್ಳುವ ಪ್ರಶ್ನೇಯೇ ಇಲ್ಲ  ಎಂದು  ರಾಜ್ಯ ಪ್ರದೇಶ ಕಾಂಗ್ರೆಸ್  ಸಮಿತಿ -ಕೆಪಿಸಿಸಿ  ಅಧ್ಯಕ್ಷ  ದಿನೇಶ್ ಗುಂಡೂರಾವ್  ಇಂದು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಕೆಲ ಅನರ್ಹ ಶಾಸಕರು  ತಮ್ಮನ್ನು ಸಂಪರ್ಕಿಸಿ, ಕಾಂಗ್ರೆಸ್  ಪಕ್ಷ ಮರು ಸೇರ್ಪಡೆಯ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೆ,  ಅವರನ್ನು ಮತ್ತೆ   ಪಕ್ಷಕ್ಕೆ ಸೇರಿಸಿಕೊಳ್ಳದಿರಲು ಕಾಂಗ್ರೆಸ್ ನಿರ್ಧರಿಸಿದೆ.  ಮೈತ್ರಿ ಕೂಟ ಸರ್ಕಾರಕ್ಕೆ ದ್ರೋಹವೆಸಗಿದ  ಅನರ್ಹರನ್ನು ಯಾವುದೇ ಕಾರಣಕ್ಕೂ ಮರು ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು    ಸ್ಪಷ್ಟಪಡಿಸಿದರು.

ಕಾಂಗ್ರೆಸ್ – ಜೆಡಿಎಸ್  ಮೈತ್ರಿ   ಸರ್ಕಾರ  ಮಂಜೂರು ಮಾಡಿರುವ  ಯೋಜನೆಗಳನ್ನು   ಬಿ .ಎಸ್ . ಯಡಿಯೂರಪ್ಪ  ನೇತೃತ್ವದ   ಬಿಜೆಪಿ ಸರ್ಕಾರ  ರದ್ದುಪಡಿಸಿದೆ.  ಕಾಂಗ್ರೆಸ್, ಜೆಡಿಎಸ್  ಶಾಸಕರ  ವಿಧಾನಸಭಾ ಕ್ಷೇತ್ರಗಳಿಗೆ  ಹಂಚಿಕೆ ಮಾಡಲಾಗಿದ್ದ ಅನುದಾನಗಳನ್ನು   ಹಿಂಪಡೆಯಲಾಗಿದೆ  ಎಂದ  ದಿನೇಶ್  ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.