ಅನಾರೋಗ್ಯದಿಂದ ಸ್ಯಾಂಡಲ್‌ವುಡ್‌ ಹಾಸ್ಯನಟ ವಠಾರ ಮಲ್ಲೇಶ್‌ ಸಾವು

Featured, ರಾಜ್ಯ ನ್ಯೂಸ್

ವಠಾರ ಧಾರವಾಹಿಯಲ್ಲಿ ಅಭಿನಯ ಮಾಡಿ ಕಿರುತೆರೆ, ಹಾಗೂ ಹಿರಿತೆರೆಯಲ್ಲಿ ವಠಾರ ಮಲ್ಲೇಶ್‌ ಅಂತನ ಗುರುತಿಸಿಕೊಂಡಿದ್ದ ನಟ ಮಹೇಶ್ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.

100 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಹಾಸ್ಯ ಪಾತ್ರದಲ್ಲಿ ನಟನೆ ಮಾಡಿದ್ದಾರೆ ಮೃತ ಮಹೇಶ್. ಇನ್ನು ಕಿಡ್ನಿ ವೈಫ್ಯಲ್ಯ ಹಾಗೂ ಹಾಗು ಬ್ರೇನ್ ಸ್ಟ್ರೋಕ್ ನಿಂದ ಬಳಲುತಿದ್ದ ವಠಾರ ಮಹೇಶ್ ಅವರನ್ನು ಕಿಮ್ಸ್ ಆಸ್ಪತ್ರೆಗೆ ಅವರನ್ನು ಚಿಕಿತ್ಸೆಗಾಗಿ ಕಳೆದ ಒಂದು ವಾರದ ಹಿಂದೆ ದಾಖಲು ಮಾಡಲಾಗಿತ್ತು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗುವುದಿಲ್ಲ ಅಂತ ಹೇಳಿದ ಆಸ್ಪತ್ರೆ ವೈದ್ಯರು ಅವರನ್ನು ಮನೆಗೆ ವಾಪಸ್ಸು ಕಳುಹಿಸಿದ್ದರು ಎನ್ನಲಾಗಿದೇ ವೇಳೆ ಮನೆಗೆ ಬಂದಿದ್ದ ಮಹೇಶ್ ಮನೆಯಲ್ಲಿ ಕೊನೆಯುಸಿರೆಳೆದ್ದಾರೆ ಅಂತ ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.

ನೂರಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಇವರು ದರ್ಶನ್ ಅಭಿಮಾನಿಯಾಗಿದ್ದು, ಕೊನೆಗಳಿಗೆಯಲ್ಲೂ ದರ್ಶನ್ ರನ್ನು ನೋಡಬೇಕ ಅನ್ನುವುದು ಅವರ ಅಭಿಲಾಷೆಯಾಗಿತ್ತು ಎಂದು ತಿಳಿದು ಬಂದಿದೆ.