ಅನ್ಯ ಧರ್ಮಗಳಿಗೆ ಹಿಂದೂ ಧರ್ಮದಿಂದ ಮತಾಂತರ ಆಗಿರುವವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರಲು ಹಿಂದೂಗಳು ಪ್ರತಿಜ್ಞೆ ಮಾಡಬೇಕು : ಮೋಹನ್ ಭಾಗವತ್ – Vishwanews24
ಅನ್ಯ ಧರ್ಮಗಳಿಗೆ ಹಿಂದೂ ಧರ್ಮದಿಂದ ಮತಾಂತರ ಆಗಿರುವವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರಲು ಹಿಂದೂಗಳು ಪ್ರತಿಜ್ಞೆ ಮಾಡಬೇಕು : ಮೋಹನ್ ಭಾಗವತ್ – Vishwanews24
ಲಖನೌ: “ಅನ್ಯ ಧರ್ಮಗಳಿಗೆ ಹಿಂದೂ ಧರ್ಮದಿಂದ ಮತಾಂತರ ಆಗಿರುವವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರಲು ಹಿಂದೂಗಳು ಪ್ರತಿಜ್ಞೆ ಮಾಡಬೇಕು” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಚಾಲಕ ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ಚಿತ್ರಕೂಟದಲ್ಲಿ ನಡೆಯುತ್ತಿರುವ ಹಿಂದೂ ಮಹಾಕುಂಭದಲ್ಲಿ ಮಾತನಾಡಿದ ಅವರು, “ಮತಾಂತರ ಆಗಿರುವವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರಲು ಎಲ್ಲರೂ ಪ್ರತಿಜ್ಞೆ ಮಾಡಬೇಕಿದೆ. ಜೊತೆಗೆ ಹಿಂದೂಗಳು ಮತಾಂತರ ಆಗದಂತೆಯೂ ನೋಡಿಕೊಳ್ಳಬೇಕಿದೆ. ನಾವೆಲ್ಲರೂ ಹಿಂದೂ ಸಹೋದರಿಯರ ಘನತೆಯನ್ನು ಕಾಪಾಡುವ ಪ್ರತಿಜ್ಞೆ ಮಾಡಬೇಕಿದೆ” ಎಂದಿದ್ದಾರೆ.
“ಮಹಾಕುಂಭದಲ್ಲಿ ಭಾಗವಹಿಸಿರುವ ಸ್ವಾಮೀಜಿಗಳು ಹಾಗೂ ದಾರ್ಶನಿಕರು ಲವ್ ಜಿಹಾದ್, ಮತಾಂತರಕ್ಕೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದ ಅವರು, ಹಿಂದೂ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ರಕ್ಷಿಸಬೇಕು” ಎಂದು ಹೇಳಿದ್ದಾರೆ.
“ಹಿಂದೂಗಳಲ್ಲಿ ಏಕತೆ ತರಬೇಕಾದ ಅವಶ್ಯಕತೆ ಇದ್ದು, ಜಾತೀಯತೆ ಹಾಗೂ ಇತರ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಬೇಕಿದೆ” ಎಂದಿದ್ದಾರೆ.
ಉಪ್ಪಿನಂಗಡಿ ಪೊಲೀಸರ ಮೇಲೆ ಹಲ್ಲೆ : PFI ಸಂಘಟನೆ ನಿಷೇದಕ್ಕೆ ವಿಶ್ವ ಹಿಂದೂ ಪರಿಷತ್ ಆಗ್ರಹ – Vishwanews24
