ಅಪರೇಷನ್ ಕಮಲ ಭೀತಿ: ಅಸ್ಸಾಂನ 10 ಮಂದಿ ಕಾಂಗ್ರೆಸ್​​ ಶಾಸಕರು ಬಿಡದಿ ರೆಸಾರ್ಟ್​ಗೆ ಶಿಫ್ಟ್​ – vishwanews24

Featured, ರಾಜ್ಯ ನ್ಯೂಸ್

ಅಪರೇಷನ್ ಕಮಲ ಭೀತಿ: ಅಸ್ಸಾಂನ 10 ಮಂದಿ ಕಾಂಗ್ರೆಸ್​​ ಶಾಸಕರು ಬಿಡದಿ ರೆಸಾರ್ಟ್​ಗೆ ಶಿಫ್ಟ್​

ರಾಮನಗರ: ಅಸ್ಸಾಂನಲ್ಲಿ ಅಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ, ಅಲ್ಲಿನ 10 ಮಂದಿ ಕಾಂಗ್ರೆಸ್​​ ಶಾಸಕರನ್ನು ರಾಮನಗರದ ಬಿಡದಿ ಸಮೀಪದ ವಂಡರ್ ಲಾ ಹಾಗೂ ಈಗಲ್ ಟನ್ ರೆಸಾರ್ಟ್​ಗಳಿಗೆ ಕರೆತರಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಶಾಸಕರನ್ನು ಇಲ್ಲಿಗೆ ಶಿಫ್ಟ್​ ಮಾಡಲಾಗಿದೆ ಎನ್ನಲಾಗಿದೆ.

ಅಸ್ಸಾಂ ಶಾಸಕರ ಗುರುವಾರ ತಡರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ, ಕಾಂಗ್ರೆಸ್ ಮುಖಂಡರು ಶಾಸಕರನ್ನು 8 ಇನ್ನೋವಾ ಕಾರುಗಳಲ್ಲಿ ವಂಡರ್ ಲಾ ಹಾಗೂ ಈಗಲ್ ಟನ್ ರೆಸಾರ್ಟ್​​ಗೆ ಕರೆ‌ ತಂದಿದ್ದಾರೆ. ರೆಸಾರ್ಟ್​​ಗೆ ಬಂದ ಶಾಸಕರನ್ನು ಹೂ ಹಾರ ಹಾಕಿ ಸ್ವಾಗತಿಸಿದ ಸ್ಥಳೀಯ ಕಾಂಗ್ರೆಸ್ ಮುಖಂಡರು ವಿಶ್ರಾಂತಿ ಪಡೆಯಲು ಅವರಿಗೆ ಮೊದಲೇ ಕಾಯ್ದಿರಿಸಿದ ಕೊಠಡಿಗಳಿಗೆ ಕಳುಹಿಸಿದ್ದಾರೆ.

ಇದನ್ನೂ ಓದಿ:👇

ಕಾರು ಪಲ್ಟಿ  :  ಇಬ್ಬರು ಸ್ಥಳದಲ್ಲೇ ಸಾವು ; ಮತ್ತಿಬ್ಬರು ಗಂಭೀರ – vishwanews24

ರೆಸಾರ್ಟ್ ಸುತ್ತ ಸ್ಥಳೀಯ ಪೊಲೀಸರಿಂದ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಡಿ.ಕೆ.ಶಿವಕುಮಾರ್ ಆಪ್ತ ಕಾಂಗ್ರೆಸ್ ಮುಖಂಡರಿಗೆ ಮಾತ್ರ ರೆಸಾರ್ಟ್​ಗೆ ಪ್ರವೇಶವಿದ್ದು, ಬೇರೆ ಯಾರೂ ಸುಳಿಯದಂತೆ ಎಚ್ಚರಿಕೆ ವಹಿಸಲಾಗಿದೆ.*

Leave a Reply