ಮಂಡ್ಯ: ಮುಸ್ಲಿಂ ವಿವಾಹಿತನೋರ್ವ ಹಿಂದೂ ಧರ್ಮದ ಬಾಲಕಿಯ ಅಶ್ಲೀಲ ವೀಡಿಯೋ ಚಿತ್ರಿಸಿ, ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ವೆಸಗಿದ್ದಾನೆ. ಅಲ್ಲದೇ ತನ್ನ ಧರ್ಮಕ್ಕೆ ಮತಾಂತರವಾದರೆ ಮದುವೆಯಾಗುವ ಆಸೆಯನ್ನು ತೋರಿಸಿದ್ದಾನೆ.
ಸಕ್ಕರೆ ನಾಡು ಮಂಡ್ಯದಲ್ಲಿ ಇತ್ತೀಚಿಗೆ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಮುಸ್ಲಿಂ ವಿವಾಹಿತನೊಬ್ಬ ಹಿಂದೂ ಧರ್ಮದ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ತನ್ನ ಧರ್ಮಕ್ಕೆ ಮತಾಂತರವಾದರೆ ಮದುವೆಯಾಗುವುದಾಗಿ ಆಸೆ ತೋರಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ✴️ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಕ್ರಿಕೆಟಿಗ ಕೆ.ಎಲ್.ರಾಹುಲ್ – Vishwanews24
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು 25 ವರ್ಷದ ಯೂನಸ್ ಫಾಷ ಎಂದು ಗುರುತಿಸಲಾಗಿದೆ. ಎದುರು ಮನೆಯಲ್ಲೇ ವಾಸವಿದ್ದ ಬಾಲಕಿಯ ಸ್ನೇಹ ಸಂಪಾದಿಸಿದ್ದ ಯೂನಸ್ ಪಾಷ, ಹೆತ್ತವರಿಗೆ ತಿಳಿಯದಂತೆ ಮೊಬೈಲ್ ಕೊಡಿಸಿದ್ದ. ಬಳಿಕ ವೀಡಿಯೋ ಕಾಲ್‍ನಲ್ಲಿ ಬಾಲಕಿಯನ್ನು ಪುಸಲಾಯಿಸಿ ಬೆತ್ತಲೆ ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಆ ವೀಡಿಯೋವನ್ನು ಸೋಷಿಯಲ್ ಮೀಡಿಯಾಗೆ ಅಪ್‍ಲೋಡ್ ಮಾಡುವ ಬೆದರಿಕೆಯೊಡ್ಡಿದ್ದಲ್ಲದೇ, ಮುಸ್ಲಿಂ ಧರ್ಮಕ್ಕೆ ಮತಾಂತರವಾದರೆ ಮದುವೆಯಾಗುವ ಆಸೆಯನ್ನು ತೋರಿಸಿ ನವೆಂಬರ್ 11ರಂದು ಅತ್ಯಾಚಾರ ಮಾಡಿದ್ದಾನೆ.
ಬಾಲಕಿಯ ತಂದೆ ನವೆಂಬರ್ 8 ರಂದು ಶಿರಡಿಗೆ ಹೋಗಿದ್ದರು. ಈ ವೇಳೆ ತಾಯಿಯೊಂದಿಗೆ ಅಜ್ಜಿ ಮನೆಗೆ ಹೋಗಿದ್ದ ಬಾಲಕಿಗೆ ನಿದ್ರೆ ಮಾತ್ರೆಯನ್ನು ಪುಡಿ ಮಾಡಿ ನೀಡಿದ್ದ ಕಾಮುಕ ಯೂನಸ್, ನವೆಂಬರ್ 11ರ ರಾತ್ರಿ ಸಾಂಬಾರಿಗೆ ಹಾಕಿಸಿದ್ದ. ಬಳಿಕ ಮನೆಯೊಳಗೆ ಬಂದು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆದಾದ ಬಳಿಕ ಬಾಲಕಿಯ ನಡುವಳಿಕೆಯಲ್ಲಾದ ಬದಲಾವಣೆ ಗಮನಿಸಿದ ಪೋಷಕರು ವಿಚಾರಿಸಿದಾಗ ಅತ್ಯಾಚಾರ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ 19ರಂದು ಬಾಲಕಿಯ ತಂದೆ ದೂರು ನೀಡಿದ್ದು, ಸದ್ಯ ಪೊಲೀಸರು ಯೂನಸ್ ಪಾಷನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…