ಅಬಾಕಸ್ ಸ್ಪರ್ಧೆ: ವಿದ್ಯಾ ಪ್ರಸಾರ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ರಾಷ್ಟ್ರಮಟ್ಟದ ಸಾಧನೆ
ಅಬಾಕಸ್ ಸ್ಪರ್ಧೆ: ವಿದ್ಯಾ ಪ್ರಸಾರ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ರಾಷ್ಟ್ರಮಟ್ಟದ ಸಾಧನೆ
ಪಡುಬಿದ್ರಿ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ವತಿಯಿಂದ 2019ರ ಜನವರಿ 26ರಂದು ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಇಂಟರ್ ನ್ಯಾಷನಲ್ ಸೆಂಟರ್ನಲ್ಲಿ ಜರಗಿದ 14ನೇ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಾಂಶುಪಾಲರಾದ ಶ್ರೀಮತಿ ರಾಜೇಶ್ವರಿ ಯವರ ನೇತೃತ್ವದಲ್ಲಿ ಹೆಜಮಾಡಿಕೋಡಿಯ ವಿದ್ಯಾ ಪ್ರಸಾರ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಕು| ಸ್ರೃಷ್ಠಿ ಕೆ ಪುತ್ರನ್, ಕು| ನಫೀಸತು ಝಕಿಯಾ ಮೂರನೇ ಸ್ಥಾನವನ್ನೂ, ಕು| ತೃಷಾ ಪಿ ಕೋಟ್ಯಾನ್, ಕು| ಕೀರ್ತನ, ಕು| ವ್ರಷಾಂಕ ರವರು ಚತುರ್ಥ ಸ್ಥಾನವನ್ನೂ, ಕು| ಅನ್ವಿತ, ಕು| ಸಿಂಚನ ಪುತ್ರನ್, ಕು| ಯಶಸ್ವಿ, ಮಾ| ದೀಪಕ್ ಡಿ ಕರ್ಕೇರ, ಮಾ|.ಶಮಿತ್, ಮಾ| ತನಿಷ್ ಎಲ್ ಅಮೀನ್, ಮಾ| ರಿತಿಲ್, ಮಾ| ಗಗನ್, ಮಾ| ಫಾಝಿಲ್ ಐದನೇ ಸ್ಥಾನವನ್ನೂ, ಮಾ| ಮೊಹಮ್ಮದ್ ಫಝಲ್, ಕು| ಅನನ್ಯ, ಕು| ತ್ರೃಷಾ ಹೆಚ್, ಕು| ರಿತಿಕಾ, ಕು| ತ್ರೃಷಾ ದೇವಾಡಿಗ, ಕು| ನಿಶ್ವಿತ್ ಎಲ್, ಮಾ| ಅನುಷ್ ಡಿ ಕೋಟ್ಯಾನ್ ಹಾಗೂ ಮಾ| ಪ್ರ ತ್ಯ ಕ್ಷ – ಇವರು ಸಮಾಧಾನಕರ ಬಹುಮಾನಗಳನ್ನೂ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಹಾಗೂ ಹೆತ್ತವರು ಅಭಿನಂದಿಸಿದ್ದಾರೆ.


