ಅಬುದಾಭಿ ಲಾಟರಿ : ವಿಜೇತರಾಗಿ ಸುಳ್ಯದ ಯುವಕನಿಗೆ ಒಲಿದು ಬಂತು 23 ಕೋಟಿ..-Vishwanews24
ಸುಳ್ಯ: ಅಬುಧಾಬಿಯ ಡ್ರೀಮ್ ಮಿಲೇನಿಯಂ ಸಿರೀಸ್ 208 ಇದರ ವಿಜೇತರಾಗಿ ಸುಳ್ಯದ ಯುವಕನಿಗೆ 23 ಕೋಟಿ ಲಭಿಸಿದೆ.
ಸುಳ್ಯದ ಫಯಾಜ್ ಪ್ರಸ್ತುತ ಮುಂಬೈನಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗುರುವಾರ ಡ್ರಾ ಮಾಡಲಾದ ಹನ್ನೆರಡು ಮಿಲಿಯನ್ ದಿರ್ ಹಾಂ (ಅಂದಾಜು 23 ಕೋಟಿ) ಲಾಟರಿ ಪ್ರಥಮ ಬಹುಮಾನ ಸುಳ್ಯ ಜಟ್ಟಿಪಳ್ಳದ ಮಹಮ್ಮದ್ ಫಯಾಜ್ ಅವರಿಗೆ ಲಭಿಸಿದೆ ಎಂದು ತಿಳಿದುಬಂದಿದೆ.
ಮುಂಬೈಯಲ್ಲಿ ಉದ್ಯೋಗದಲ್ಲಿರುವ ಫಯಾಜ್ ಕಳೆದ ಆರು ತಿಂಗಳಿನಿಂದ ದೊಡ್ಡ ಮೊತ್ತದ ಅಬುದಾಬಿ ಲಾಟರಿ ಟಿಕೆಟ್ ಗಳನ್ನು ಖರೀದಿಸುತ್ತಿದ್ದರು. ಇದೀಗ ಪ್ರಥಮ ಬಹುಮಾನದ ರೂಪದಲ್ಲಿ ಅದೃಷ್ಟ ಒಲಿದು ಬಂದಿದೆ.
