Featured

ಅಮೃತ್ ಶೆಣೈಯ ಮಿಂಚಿನ ಸಂಚಾರದ ಮತಬೇಟೆ, ವಜ್ರ ಮಿನುಗುತ್ತಾ…? – vishwanews24

udupi: ಪಕ್ಕಾ ಕಾಂಗ್ರೇಸ್ಸಿಗನಾಗಿರುವ ಅಮೃತ್ ಶೆಣೈಯವರು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಪಕ್ಷೇತರನಾಗಿ ವಜ್ರದ ಚಿನ್ಹೆಯೊಂದಿಗೆ ಸ್ಪರ್ಧಿಸುತ್ತಿರುವ ಕಾರಣ ಕಾಂಗ್ರೇಸ್ -ಜೆಡಿಎಸ್ ಮೈತ್ರಿ ಸರಕಾರದ ವಿರುದ್ಧ ಗಂಟಲ ಮುಳ್ಳಾಗಿ ಕಾಡಲಿದ್ದಾರೆಯೇ ಎಂಬ ಅನುಮಾನ ಮತದಾರರಲ್ಲಿ ಕಾಡುತ್ತಿದೆ

ಪಕ್ಕಾ ಕಾಂಗ್ರೆಸ್ಸಿಗರಾಗಿರುವ ಹಾಗೂ ಜಾತ್ಯಾತೀತ ನಿಲುವು ಹೊಂದಿರುವ ಅಮೃತ್ ಶೆಣೈಯವರು ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ದೊಡ್ದ ಸಂಖ್ಯೆಯ ಜಾತ್ಯಾತೀತ ಮತಗಳನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸ ಬಹುದು ಎಂಬ ಅನುಮಾನಕ್ಕೆ ಸಕಾರಣ ಕೂಡಾ ಇದೆ.

ಜಾತ್ಯಾತೀತ ನಿಲುವು ಹೊಂದಿರುವ ಅಮೃತ್ ಶೆಣೈಯವರು ಓರ್ವ ಪಕ್ಕಾ ಕಾಂಗ್ರೇಸಿಗನಾಗಿದ್ದಾರೆ. ಆದರೆ ಮೈತ್ರಿ ಸರಕಾರದ ನಿರ್ಧಾರದ ಕಾರಣ ಉಡುಪಿ ಚಿಕ್ಕಮಗಳುರು ಕ್ಷೇತ್ರವನ್ನು ಕಾಂಗ್ರೇಸ್-ಜೆಡಿಎಸ್ ಮೈತ್ರಿ ಸರಕಾರವು ಜೆಡಿಎಸ್ ಗೆ ಬಿಟ್ಟು ಕೊಟ್ಟಿರುವ ಕಾರಣ ಅಸಮಧಾನ ಹೊಂದಿದ್ದಾರೆ. ಜೆಡಿಎಸ್ ನಲ್ಲಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಮರ್ಥ ನಾಯಕರಿಲ್ಲದ ಕಾರಣ ಕಾಂಗ್ರೆಸ್ ನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರನ್ನು ಜೆಡಿಎಸ್ ನಿಂದ ಸ್ಪರ್ಧಿಸಲು ಟಿಕೆಟ್ ಕೊಟ್ಟಿದೆ.

ಅದಾಗ್ಯೂ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಏರುವ ಸಮಯದಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಜಯಗಳಿಸಿದ್ದ ಪ್ರಮೋದ್ ಮಧ್ವರಾಜ್ ರವರು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ರಘುಪತಿ ಭಟ್ ವಿರುದ್ಧ ಭಾರಿ ಅಂತರದಲ್ಲಿ ಸೋಲುಂಡಿದ್ದರು. ಇದೀಗ ಮತ್ತೆ ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ನೀಡಲಾಗಿದೆ. ಆದರೆ ತನ್ನ ವರ್ಚಸ್ಸನ್ನು ತಾನೇ ಹಾಳು ಮಾಡಿಕೊಂಡಿರುವ ಪ್ರಮೋದ್ ಮಧ್ವರಾಜ್ ರವರಿಗೆ ಈ ಬಾರಿ ಜಾತ್ಯಾತೀತ ಮತಗಳು ನಿರೀಕ್ಷಿತ ಮಟ್ಟದಲ್ಲಿ ಸಿಗುವುದು ಕಷ್ಟ ಎಂದು ಭಾವಿಸಲಾಗಿದೆ. ಇದಕ್ಕೆ ಬಲುಮುಖ್ಯ ಎರಡು ಕಾರಣಗಳಿವೆ.

ಒಂದನೆಯದಾಗಿ, ತಾನು ಸಚಿವನಾಗಿದ್ದ ಸಂದರ್ಭದಲ್ಲಿ ಕಾಂಗ್ರೇಸ್ ನಿಂದ ಬಿಜೆಪಿ ಪಕ್ಷಕ್ಕೆ ಪಕ್ಷಾಂತರವಾಗಲು ಬಯಸಿದ್ದರು. ಇದಕ್ಕಾಗಿ ಬಿಜೆಪಿಯ ಬಾಗಿಲನ್ನು ತಟ್ಟಿದ್ದರು. ಆದರೆ ಹಾಲಿ ಶಾಸಕ ರ ವಿರೋಧದ ಕಾರಣ ಈ ಅವಕಾಶವು ತಪ್ಪಿ ಹೋಗಿತ್ತು ಹಾಗಾಗಿ ಒಂದು ವೇಳೆ ಜಾತ್ಯಾತೀತ ಮತಗಳನ್ನು ಪಡೆದು ಜಯಗಳಿಸಿದ ನಂತರ ಬಿಜೆಪಿ ಪಕ್ಷಕ್ಕೆ ಹಾರುವುದಿಲ್ಲ ಎನ್ನುವುದು ಗ್ಯಾರಂಟಿ ಏನು ಎಂಬುದು ಜನರಲ್ಲಿರುವ ಯಕ್ಷ ಪ್ರಶ್ನೆಯಾಗಿದೆ. ಇದೇ ಕಾರಣಕ್ಕಾಗಿ ತಮ್ಮ ಮತಕ್ಕೆ ನ್ಯಾಯ ಸಿಗುವ ಭರವಸೆ ಇಲ್ಲದ ಕಾರಣ ಹಲವಾರು ಜಾತ್ಯಾತೀತ ಮತದಾರರು ಚುನಾವಣೆಯಲ್ಲಿ ಭಾಗವಹಿಸಲು ಉತ್ಸಾಹ ತೋರಿಸುತ್ತಿಲ್ಲ. ಆದರೆ ಪಕ್ಕಾ ಜಾತ್ಯಾತೀತ ನಿಲು ಹೊಂದಿರುವ ಪಕ್ಷೇತರ ಅಭ್ಯರ್ಥಿಯಾಗಿರುವ ಅಮೃತ್ ಶೆಣೈಯವರು ಪರಿಣಾಮಕಾರಿ ಪ್ರಚಾರ ಕೈಗೊಂಡಲ್ಲಿ, ಅಭ್ಯರ್ಥಿಯನ್ನು ಆಯ್ಕೆ ಮಾಡುವ ಗೊಂದಲದಲ್ಲಿರುವ ಸಾಕಷ್ಟು ಜಾತ್ಯಾತೀತ ಮತಗಳು ಅವರ ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಎರಡನೇಯ ಮುಖ್ಯ ಕಾರಣವೆಂದರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿರುವ ಮುಸ್ಲಿಂ ಮತದಾರರು ಈ ಬಾರಿ ಕಾಂಗ್ರೆಸ್- ಜೆಡಿಎಸ್ ಅಭ್ಯರ್ಥಿಯಾಗಿರುವ ಪ್ರಮೋದ್ ಮಧ್ವರಾಜ್ ರವರಿಗೆ ಮತ ಹಾಕಲು ಮನಸ್ಸಿಲ್ಲದೆ ಯಾವುದೇ ಪಕ್ಷ ಬೇಡ ಎಂದು ತಟಸ್ಥರಾಗಿ ಉಳಿಯಲು ಬಯಸಿದ್ದವರಿಗೆ ಅಮೃತ್ ಶೆಣೈ ಎಂಬ ಒಂದು ಆಯ್ಕೆ ಕೂಡಾ ಇದೆ. ಏಕೆಂದರೆ ಕಳೆದ ಸಿದ್ದರಾಮಯ್ಯ ಸರಕಾರದ ಸಮಯದಲ್ಲಿ “ಟಿಪ್ಪು ಜಯಂತಿ”ಯನ್ನು ಸರಕಾರದ ಪ್ರಾಯೋಜಕತ್ವದಲ್ಲಿ ರಾಜ್ಯಾದ್ಯಂತ ಆಚರಿಸಲಾಗಿತ್ತು. ಆದರೆಾಗಿನ ಕಾಂಗ್ರೆಸ್ ಮಂತ್ರಿಯಾಗಿದ್ದ ಪ್ರಮೋದ್ ಮಧ್ವರಾಜ್ ರವರು ಅನಾರೋಗ್ಯದ ಕಾರಣ ನೀಡಿ ಈ ಕಾರ್ಯಕ್ರಮದಿಂದ ಉದ್ದೇಶಪೂರ್ವಕವಾಗಿ ಗೈರು ಹಾಜರಾಗಿದ್ದರು. ಈ ಮಾತನ್ನು ಚರ್ಚ್ ಒಂದರ ಸಮಾರಂಭದಲ್ಲಿ ಸಭಿಕರನ್ನು ಉದ್ದೇಶಿಸಿ “ಟಿಪ್ಪು ಜಯಂತಿಯಲ್ಲಿ ಭಾಗವಹಿಸದಂತೆ ದೇವರೇ ನನಗೆ ಮಾಡಿದ್ದನು” ಹೇಳಿರುವ ವಿಡಿಯೋ ವೈರಲ್ ಆಗಿತ್ತು. ಹೊರಗಿನಿಂದ ಜಾತ್ಯಾತೀತ ಮುಖವಾಡ ಹೊತ್ತಿರುವ ಪ್ರಮೋದ್ ರವರು ಒಳಗಿನಿಂದ ಮುಸ್ಲಿಂ ವಿರೋಧಿ ಧೋರಣೆ ಹೊಂದಿದ್ದಾರೆ ಎಂಬುದು ಇಲ್ಲಿನ ಮುಸ್ಲಿಂ ಮತದಾರರಲ್ಲಿ ಬೇರೂರಿದೆ.

ಇದೇ ಸಂದರ್ಭದಲ್ಲಿ ನಾನೋರ್ವ ಪಕ್ಕಾ ಕಾಂಗ್ರೆಸಿಗನಾಗಿದ್ದರೂ ಕೂಡಾ, ಮೈತ್ರಿ ಸರಕಾರದ ಲಾಜಿಕ್ ಇಲ್ಲದ ನಿರ್ಧಾರಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಅಮೃತ್ ಶೆಣೈ ಹೇಳಿದ್ದಾರೆ.

ಈಗಾಗಲೇ ಉಡುಪಿ ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿಯಲ್ಲಿ ಮತಬೇಟೆಯ ಮಿಂಚಿನ ಸಂಚಾರ ನಡೆಸುತ್ತಿರುವ ಶೆಣೈ ಜನರ ಪಾಲಿಗೆ ಮತ್ತಷ್ಟೂ ಹತ್ತಿರವಾಗುವಂತೆ ಕಾಣುತ್ತಿದ್ದಾರೆ. ಶೆಣೈ ಹೋದ ಜಾಗದಲ್ಲಿ ಮತದಾರರು ಅವರಾಗಿಯೇ ಬಂದು ವಜ್ರದ ಚಿಹ್ನೆಯನ್ನ ಒತ್ತುವುದಾಗಿ ಹೇಳುತ್ತಿರುವುದು ಗೆಲುವಿನ ಹಾದಿಯನ್ನ ಮತ್ತಷ್ಟು ಸುಗಮವಾಗಿಸಿದೆ

ತಮ್ಮ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡದಿದ್ದರೂ ಮೋದಿಗಾಗಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಗೆ ಮತ ಹಾಕಲಿರುವ ಮತದಾರರು ಒಂದು ಕಡೆಯಾದರೆ, ನರೇಂದ್ರ ಮೋದಿಯವರು ಮತ್ತೆ ಅಧಿಕಾರಕ್ಕೆ ಏರಬಾರದು ಎಂಬ ಏಕೈಕ ಉದ್ದೇಶಕ್ಕಾಗಿ ಕಾಂಗ್ರೇಸ್ ಕಾರ್ಯಕರ್ತರು ಬೇರೆ ಆಯ್ಕೆ ಇಲ್ಲದೆ ಜೆಡಿಎಸ್ ನಿಂದ ಟಿಕೆಟ್ ಪಡೆದು ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನ ಪ್ರಮೋದ್ ಮಧ್ವರಾಜ್ ರವನ್ನು ಬೆಂಬಲಿಸುವ ಮತದಾರರು ಇನ್ನೊಂದು ಕಡೆ. ಇದರ ಮಧ್ಯೆ ಬಿಜೆಪಿ ಸೆರಬಹುದೆಂಬ ಆತಂಕ ಹಾಗೂ ಟಿಪ್ಪು ಸುಲ್ತಾನ್ ವಿರೋಧಿ ಧೋರಣೆಯ ಕಾರಣಕ್ಕಾಗಿ ಹೊಸ ಮುಖದ ಹುಡುಕಾಟದಲ್ಲಿರುವ ಮತ್ತೊಂದು ಮತದಾರ ವರ್ಗಕ್ಕೆ ವಜ್ರದ ಚಿನ್ಹೆಯ ಅಮೃತ್ ಶೆಣೈಯವರು ಪರ್ಯಾಯವಾಗಿ ಕಾಣುತ್ತಿದ್ದಾರೆ ಎಂಬುದಂತೂ ದಿಟ.

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

1 day ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

1 day ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

1 day ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

1 day ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

1 day ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

1 day ago