ಅಮೃತ್ ಶೆಣೈ ಈಗ ಮಾಸ್ ಪಕ್ಷೇತರ ಅಭ್ಯರ್ಥಿ, ಎರಡೂ ಪಕ್ಷದ ಅಭ್ಯರ್ಥಿಗಳಿಗಿಂತ ಲೀಡ್ ಪ್ರಚಾರ, ಅದಕ್ಕೂ ಮುನ್ನ ಈ ವರದಿ ಓದಿ.

Featured, ಉಡುಪಿ, ರಾಜ್ಯ ನ್ಯೂಸ್

ಅಮೃತ್ ಶೆಣೈ ಈಗ ಮಾಸ್ ಪಕ್ಷೇತರ ಅಭ್ಯರ್ಥಿ, ಎರಡೂ ಪಕ್ಷದ ಅಭ್ಯರ್ಥಿಗಳಿಗಿಂತ ಲೀಡ್ ಪ್ರಚಾರ, ಅದಕ್ಕೂ ಮುನ್ನ ಈ ವರದಿ ಓದಿ.

ಉಡುಪಿ: ಕಾಂಗ್ರೇಸ್ನ ಯೂತ್ ಐಕಾನ್ ಎಂದೇ ಹೆಸರು ಪಡೆದಿದ್ದ ಅಮೃತ್ ಶೆಣೈ ಹೈಕಮಾಂಡ್ನ ಧ್ವಂಧ್ವ ನಿಲುವಿನ ವಿರುದ್ಧ ಪಕ್ಷದಿಂದ ಹೊರಬಂದು ಉಡುಪಿ ಚಿಕ್ಕಮಗಳೂರೊ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸುತ್ತಿರುವ ಜಾತ್ಯತೀತ ನಾಯಕ.

ಸುಮಾರು ಒಂದುಸಾವಿರಕ್ಕೂ ಅಧಿಕ ಯುವಕರ ಪಡೆ ಚಿಕ್ಕಮಗಳೂರು ಭಾಗದಲ್ಲಿ ಸಂಚರಿಸಿ ಪಕ್ಷೇತರ ಅಭ್ಯರ್ಥಿ ಅಮೃತ್ ಪರ ಫುಲ್ ಪ್ರಚಾರ ಮಾಡುವಲ್ಲಿ ಬ್ಯೂಸಿಯಾಗಿದ್ದಾರೆ.ಎರಡೂ ರಾಷ್ಟ್ರೀಯ ಪಕ್ಷಗಳು ಪೊಳ್ಳು ಭರವಸೆಗಳಿಂದ ಬೇಸತ್ತ ಮತದಾರರಿಗೆ ಹೊಸ ರಿಲ್ಯಾಕ್ಸ್ ಸಿಗಬೇಕಾದರೇ ಶೆಣೈ ಅಂತಹ ನಾಯಕ ದೆಹಲಿ ಸಂಸತ್ತಿನಲ್ಲಿ ಮಾತಾಡಬೇಕೆಂದು ಅದಕ್ಕಾಗಿ ಈ ಭಾರಿ ವಜ್ರದ ಚಿಹ್ನೆಗೆ ಮತನೀಡಿ ಅಂತಾ ಬಹಿರಂಗ ಪ್ರಚಾರದಲ್ಲಿದ್ದಾರೆ ಈ ಯುವಕರು.

ಮೀನುಗಾರರ ನಾಡಿ ಮಿಡಿತವನ್ನ ಚೆನ್ನಾಗಿ ಅರಿತುಕೊಂಡು, ಅಡಿಕೆ ಬೆಳೆಗಾರರ ಪರ ಹೋರಾಟ ಮಾಡಿದ ಮತ್ತು ಜಿಲ್ಲೆಯಲ್ಲಿ ಉದ್ಭವಿಸಿದ ಮರಳು ಸಮಸ್ಯೆಯ ಬಗ್ಗೆ ಸದಾ ಚಕಾರ ಎತ್ತಿದ ಜಿಲ್ಲೆಯ ಮೊದ ನಾಯಕ ಶೆಣೈ ಎಂಬ ಮಾತು ಎಲ್ಲಾರಿಗೂ ಗೊತ್ತಿದೆ ಅಂತಹ ವ್ಯಕ್ತಿಯೇ ಈ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸತ್ತು ಪ್ರವೇಶಿಸಬೇಕೆಂದು ಮತದಾರರ ಆಶಯ.

ಅದೇಷ್ಟೋ ಬಡ ಕುಟುಂಬಗಳಿಗೆ ಮನೆ ನಿರ್ಮಾಣ,ವಿದ್ಯಾ ದಾನ, ಮದುವೆ ಮುಂಜಿ ಕಾರ್ಯಗಳಿಗೆ ವೈಯಕ್ತಿಕವಾಗಿ ಮಾಡಿದ ಸಹಕಾರ ,ಸರ್ಕಾರದಿಂದ ಬರುವ ಸವಲತ್ತುಗಳನ್ನ ನೇರವಾಗಿ ಬಡಜನರ ಮನೆಗೆ ತಲುಪಿಸಿದ ನಿಷ್ಟಾವಂತ ವ್ಯಕ್ತಿತ್ವವುಳ್ಳ ಶೆಣೈ ರಾಜಕೀಯ ಪ್ರವೇಶಿಸಿದ್ದು ದುಡ್ಡು ಮಾಡಬೇಕೆಂಬ ಚಟದಿಂದ ಅಲ್ಲಾ ಬದಲಾಗಿ ಜನಸಾಮಾನ್ಯರ ಕೆಲಸ ಅತ್ಯಂತ ಸುಲಭವಾಗಿ ನಡೆಯಬೇಕಾದರೇ ರಾಜಕೀಯದ ಒತ್ತಡ ಅಗತ್ಯ ಎಂಬ ಕಾರಣಕ್ಕಾಗಿ.

ವ್ಯವಹಾರಿಕವಾಗಿ ಇಡೀ ಉಡುಪಿಯಲ್ಲಿ ಯಾವುದೇ ಬರ ಇಲ್ಲದಿದ್ದರೂ ಡಿಗ್ರಿ ಮುಗಿದು ಹೊರಬರುವ ಯುವಕ ಯುವತಿಯರಿಗೆ ಕೆಲಸ ಮಾಡಲು ಸರಿಯಾದ ಕಂಪೆನಿಗಳಿಲ್ಲ, ರಾಜಕೀಯದ ಉದ್ದೇಶದಿಂದ ನಡೆಯುವ ಉದ್ಯೋಗ ಮೇಳಗಳು ಬರೀ ಪತ್ರೀಕಾ ವರದಿಗೆ ಸೀಮಿತವಾಗುತ್ತಿದೆ ಹೊರತು ಉದ್ಯೋಗ ಸಷ್ಟಿಯಾಗುತ್ತಿಲ್ಲ ಇದರಿಂದ ನಮ್ಮ ಯುವಕ ಯುವತಿಯರು ಕುಟುಂಬ ವರ್ಗವನ್ನ ಬಿಟ್ಟು ಬೇರೆ ರಾಜ್ಯದಲ್ಲಿ ದೇಶದಲ್ಲಿ ದುಡಿಯುವ ಅನಿವಾರ್ಯ ಪರಿಸ್ಥಿತಿ ನಿಲ್ಲಬೇಕು ಅದಕ್ಕಾಗಿ ನಮ್ಮೂರಿನಲ್ಲಿ ಉದ್ಯೋಗ ಸೃಷ್ಟಿಯಾಗ ಬೇಕು ಅದಕ್ಕೊಸ್ಕರನಾದರೂ ಓಳ್ಳೆಯ ಸಂಸದ ಬೇಕು, ಬರೀ ದೆಹಲಿ ಸಂಸತ್ತುವಿನಲ್ಲಿ ಅಂಬಡೇ ಶೀರ ತಿಂದು ಕುರ್ಚಿ ಬಿಸಿ ಮಾಡಿ ಸರ್ಕಾರ ನೀಡುವ ಸವಲತ್ತುಗಳನ್ನ ಮಜಾ ಮಾಡುವುದಲ್ಲ ಅದರ ಬದಲಾಗಿ ನಮ್ಮ ಕ್ಷೇತ್ರಕ್ಕೆ ಅಭಿವೃದ್ಧಿ ಬೇಕು ಅಂತಹ ಕೆಲಸ ಮಾಡಲು ಶೆಣೈ ಅಂತಹ ಯುವಕ ದೆಹಲಿಗೆ ಹೋಗಬೇಕು ಅನ್ನುತ್ತಾರೆ ಸಾಮಾಜಿಕ ಹೋರಾಟಗಾರ ಅನ್ಸರ್ ಅಹಮ್ಮದ್.

ಕಾಂಗ್ರೇಸ್ ನಾಯಕರ ಸಾವಿರಾರು ಭಾಷಣ ಮಾಡಿ ಗದ್ದುಗೆಯಲ್ಲಿ ಕೂರಿಸಿ ಅವರು ಕೆಲಸ ಮಾಡದೇ ಇದ್ದ ಸಮಯದಲ್ಲಿ ಅವರ ಮನೆ ಮುಂದೆ ಕೂತು ಧರಣಿ ನಡೆಸಿದ ಅತ್ಯಂತ ಸರಳ ವ್ಯಕ್ತಿ ಅಮೃತ್ ಶೆಣೈ ಗೆ ಈ ಭಾರಿ ಮತ ನೀಡಿದರೇ ಯಾವುದೇ ನಷ್ಟವಿಲ್ಲ ಬದಲಾಗಿ ಗೆದ್ದ ನಂತರ ನೀನು ಏನು ಮಾಡಿದೆ ಅಂತಾ ಕೇಳುವ ಹಕ್ಕು ಆದರೂ ನಮಗೆ ಇದೆಯಲ್ಲ ಅದಕ್ಕಾಗಿಯಾದರು ಪಕ್ಷೇತರ ಅಭ್ಯರ್ಥಿ ವಜ್ರದ ಚಿಹ್ನೆಗೆ ಕ್ರಮ ಸಂಖ್ಯೆ ಹತ್ತು ಗೆ ಮತ ಹಾಕಿ ಅನ್ನುತ್ತಾರೆ ಹಿರಿಯ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಹರಿಯಪ್ಪ.

ಓಟ್ ಹಾಕುವುದು ಬಿಡುವುದು ನಿಮಗೆ ಬಿಟ್ಟ ವಿಚಾರ ಆದರೇ ಸತ್ಯದ ಮಾತು ಕೇಳಿ ನಮ್ಮ ನಿಮ್ಮ ಕೆಲಸ ಮಾಡಲು ಮೋದಿ ಇಲ್ಲಿಗೆ ಬರುವುದಿಲ್ಲ ಅಥವಾ ನಿಮ್ಮ ಕರೆಯನ್ನ ರಿಸೀವ್ ಮಾಡುವುದು ಬಿಡಿ ಯಾರ ಕರೆ ಅಂತಾ ನೋಡುವ ತಾಳ್ಮೆಯು ಇಲ್ಲದ ಆ ವ್ಯಕ್ತಿಯನ್ನ ನೋಡಿ ಈ ಮಹಿಳೆಗೆ ಮತ ನೀಡಿ ಅನ್ನುವಿರಲ್ಲ “ಪರೀಕ್ಷೆಗೆ ಓದದೆ ಏನೂ ಬರೆಯದೇ ಮೇಸ್ಟ್ರು ಮಗ ಅಂತಾ ಪಾಸ್ ಮಾಡಿ ಸರ್ ಅಂದ್ರೆ ಕಲಿತ ಹಗಳಿರುಳು ಓದಿ ಎಕ್ಸಾಂ ಬರೆದ ನಮ್ಮ ಮಕ್ಕಳ ಪರಿಸ್ಥಿತಿ ಏನಾಗಬಹುದು ” ಅಂತಹ ಪರಿಸ್ಥಿತಿ ನಮಗೆ ಬಾರದಿರಲಿ ಅದಕ್ಕಾಗಿಯಾದರೂ ಶೆಣೈ ಬೆಂಬಲಿಸಿ ಕ್ರಮ ಸಂಖ್ಯೆ ಹತ್ತು, ಹತ್ತರಲ್ಲಿ ಮುತ್ತು ಎಂಬಂತ್ತೆ ಮೂಡಿ ಬರಲಿ ನಮ್ಮ ಸೇವಕನಾಗಲಿ ಅಮೃತ್ ಶೆಣೈ ವಜ್ರದಂತೆ ಹೊಳೆಯಲಿ ಆ ವಜ್ರದ ಸರಕ್ಕೆ ನಾವೆಲ್ಲರೂ ಸರಪಳಿಯಂತೆ ನಿಂತು ಈ ಭಾರಿಯ ಮತ ಪಕ್ಷೇತರ ಅಭ್ಯರ್ಥಿಗೆ ಮತ ನೀಡಿ ಅನ್ನತ್ತಾರೆ ಈ ದೇಶ ಕಂಡ ಖ್ಯಾತ ಮನೋಶಾಸ್ತ್ರಜ್ಞ ಡಾ. ಪಿ.ವಿ ಭಂಡಾರಿ.

ಇದುವರೆಗೆ ಚುನಾವಣೆಗಳಿಗಿಂತ ಅತ್ಯಂತ ಭಿನ್ನವಾದ ಚುನಾವಣೆ ಇದು ಪಾರ್ಟಿ ಫಂಡ್ ಇಲ್ಲ, ಹಣ ಹೆಂಡ ಖಂಡಿತ ಇಲ್ಲ ಜನರಿಂದ ಬೇಡಿ ಸಂಗ್ರಹವಾದ ಹಣದಿಂದ ಸ್ಪರ್ಧಿಸುತ್ತೀರುವ ಈ ಬಾರಿಯ ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈಯನ್ನ ಮತದಾರ ಕೈ ಹಿಡಿಯುವುದರೇ ಎಂಬುದನ್ನ ಕಾದು ನೋಡ ಬೇಕಾಗಿದೆ,