ಅಯೋಧ್ಯೆಯಂತೆ ಕಾಶಿ, ಮಥುರಾಗಳಲ್ಲೂ ಮಸೀದಿಗಳನ್ನು ತೆರವುಗೊಳಿಸಿ ಭವ್ಯವಾದ ಮಂದಿರಗಳು ನಿರ್ಮಾಣವಾಗಲಿ : ಕೆ.ಎಸ್‌‌.ಈಶ್ವರಪ್ಪ -Vishwanews24

Featured, ರಾಜ್ಯ ನ್ಯೂಸ್

ಶಿವಮೊಗ್ಗ: ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವ ಕೋಟ್ಯಾಂತರ ಹಿಂದೂಗಳ ಕನಸು ನನಸಾಗಿದೆ. ಅದೇ ರೀತಿ ಕಾಶಿ ಮಥುರಾದಲ್ಲಿ ದೇವಾಲಯಗಳನ್ನು ನಿರ್ಮಿಸಬೇಕು ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್‌‌.ಈಶ್ವರಪ್ಪ ಹೇಳಿದರು.

 

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಭಗವಂತನ ದರ್ಶನ ಪಡಯು ಕಾಶಿ, ಮಥುರಾಕ್ಕೆ ಹೋದಾಗ ನಾವು ಗುಲಾಮರಂತೆ ಎನ್ನುವ ಅನುಭವಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ದೇವಾಲಯದ ಪಕ್ಕದಲ್ಲಿರುವ ಮಸೀದಿ. ಹಾಗಾಗಿ ಭಕ್ತರಿಗೆ ಆ ದೇವಾಲಯಗಳಲ್ಲಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಮುಂಬರುವ ದಿನಗಳಲ್ಲಿ ಆ ಮಸೀದಿಗಳು ದ್ವಂಸವಾಗಿ ಅಲ್ಲಿಯೂ ಕೂಡಾ ಭವ್ಯವಾದ ಮಂದಿರಗಳು ನಿರ್ಮಾಣವಾಗಲಿ ಎಂದರು.