ಅಯ್ಯಪ್ಪ ಭಕ್ತರೊಂದಿಗೆ ಬಿಜೆಪಿ ಹಾಗು ಅರ್‌ಎಸ್‌ಎಸ್‌ನ ಕಾರ್ಯಕರ್ತರು ಬಂಡೆಯಂತೆ ನಿಂತಿದ್ದಾರೆ : ಅಮಿತ್ ಶಾ
ಕಣ್ಣೂರು, : ಶಬರಿಮಲೆ ದೇವಸ್ಥಾನದ ಆಚರಣೆಗಳ ರಕ್ಷಣೆಯ ವಿಚಾರದಲ್ಲಿ ಭಕ್ತರೊಂದಿಗೆ ಬಿಜೆಪಿ ಹಾಗು ಆರ್‌ಎಸ್‌ಎಸ್‌ನ ಕಾರ್ಯಕರ್ತರು ಹೆಬ್ಬಂಡೆಯಂತೆ ನಿಂತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಕೇರಳದ ಕಣ್ಮೂರು ಜಿಲ್ಲೆಯ ತಾಳಿಕ್ಕಾವು’ನಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಕಚೇರಿ ಉದ್ಘಾಟಿಸಿದ ಬಳಿಕ ಮಾತನಾಡಿರುವ ಅವರು, ಶಬರಿಮಲೆ ಮಹಿಳಾ ಪ್ರವೇಶದ ವಿರುದ್ಧ ಪ್ರತಿಭಟಿಸಿದ್ದ 2000 ಬಿಜೆಪಿ ಹಾಗೂ ಆರ್’ಎಸ್ಎಸ್ ಕಾರ್ಯಕರ್ತರನ್ನು ಬಂಧನಕ್ಕೊಳಪಡಿಸುವುದನ್ನು ತೀವ್ರವಾಗಿ ಖಂಡಿಸಿದ್ದಾರೆ
ಕೇರಳ ರಾಜ್ಯದಲ್ಲಿಂದು ಧಾರ್ಮಿಕ ನಂಬಿಕೆಗಳು ಹಾಗೂ ರಾಜ್ಯ ಸರ್ಕಾರದ ಕ್ರೌರ್ಯಗಳ ನಡುವೆ ಹೋರಾಟ ನಡೆಯುತ್ತಿದೆ. ಬಿಜೆಪಿ, ಆರ್’ಎಸ್ಎಸ್ ಹಾಗೂ ಇತರೆ ಸಂಘಟನೆಗಳ 2000ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧನಕ್ಕೊಳಪಡಿಸಲಾಗಿದೆ. ಬಿಜೆಪಿ ಅಯ್ಯಪ್ಪ ಭಕ್ತರ ಜೊತೆಗೆ ಬಂಡೆಯಂತೆ ನಿಂತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕೇರಳದ ಆಡಳಿತಾರೂಢ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಅವರು, ಶಬರಿಮಲೆ ಪ್ರತಿಭಟನಾಕಾರರ ವಿರುದ್ಧ ದೊಡ್ಡ ಮಟ್ಟದಲ್ಲಿ ಪೊಲೀಸ್ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಪಿಣರಾಯಿ ವಿಜಯನ್ ಸರಕಾರಕ್ಕೆ ಕೇರಳ ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿದ್ದು, “ಅಮಾಯಕರ ಬಂಧನ ಕಂಡುಬಂದಲ್ಲಿ ಪರಿಣಾಮ ನೆಟ್ಟಗಿರದು” ಎಂದಿದೆ. ಸರ್ಕಾರದ ವರ್ತನೆ ಹೀಗೆಯೇ ಮುಂದುವರೆದರೆ, ಎಲ್’ಡಿಎಸ್ ಸರ್ಕಾರವನ್ನು ಕೆಳಗಿಳಿಸಲು ಬಿಜೆಪಿ ಹಿಂಜರಿಯುವುದಿಲ್ಲ ಎಂದು ತಿಳಿಸಿದ್ದಾರೆ.
ದೇವಾಲಯದ ಪ್ರವೇಶದ ಮೂಲಕ ಲಿಂಗ ಸಮಾನತೆಯನ್ನು ಸಾಧಿಸಲು ಸಾಧ್ಯವಿಲ್ಲ. ಕೇರಳ ರಾಜ್ಯದಲ್ಲಿಂದು ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಾಣವಾಗಿದೆ. ಅಯ್ಯಪ್ಪ ಭಕ್ತರನ್ನು ಭೇದಿಸುವುದು ಬೆಂಕಿಯೊಂದಿಗೆ ಆಟವಾಡಿದಂತೆ ಎಂದು ಎಚ್ಚರಿಸಿದ್ದಾರೆ.

